Home ಟಾಪ್ ಸುದ್ದಿಗಳು ಮಡಿಕೇರಿ: ಕೊನೆ ಗಳಿಗೆಯಲ್ಲಿ ಮದುವೆ ನಿರಾಕರಿಸಿದ ವಧು; ಅದೇ ಮುಹೂರ್ತದಲ್ಲಿ ಮತ್ತೊಬ್ಬ ಯುವತಿಯ ಕೈಹಿಡಿದ ವರ

ಮಡಿಕೇರಿ: ಕೊನೆ ಗಳಿಗೆಯಲ್ಲಿ ಮದುವೆ ನಿರಾಕರಿಸಿದ ವಧು; ಅದೇ ಮುಹೂರ್ತದಲ್ಲಿ ಮತ್ತೊಬ್ಬ ಯುವತಿಯ ಕೈಹಿಡಿದ ವರ

ಕೊಡಗು: ಹಸೆಮಣೆ ಏರಲು ಇನ್ನೇನು ಎರಡು ದಿನ ಇರಬೇಕೆನ್ನುವಷ್ಟರಲ್ಲಿ ವಧುವೊಬ್ಬಳು  ಮದುವೆಯಾಗಲು ನಿರಾಕರಿಸಿದ ಪರಿಣಾಮ ವರ ಅದೇ ಮುಹೂರ್ತದಲ್ಲಿ ಮತ್ತೊಂದು ಹೆಣ್ಣಿನ ಕೈ ಹಿಡಿದಿರುವ ಘಟನೆ ಮಡಿಕೇರಿಯ ಸುಂಟಿಕೊಪ್ಪದಲ್ಲಿ ನಡೆದಿದೆ.

ಸುಂಟಿಕೊಪ್ಪ ಸಮೀಪದ ತೋಟದ ಮನೆಯೊಂದರಲ್ಲಿ ಜೂ. 1ರಂದು ಯುವಕನೊಬ್ಬನ ಮದುವೆಯನ್ನು ಮಡಿಕೇರಿಯ ಯುವತಿಯೊಂದಿಗೆ ನಿಶ್ಚಯಿಸಲಾಗಿದ್ದು,  ಜೂನ್ 5ರಂದು ಸುಂಟಿಕೊಪ್ಪದಲ್ಲಿ ಆರತಕ್ಷತೆಯನ್ನು ನಿಗದಿಪಡಿಸಲಾಗಿತ್ತು. ಆದರೆ, ಮದುವೆಗೆ ಎರಡು ದಿನ ಇರಬೇಕೆನ್ನುವಷ್ಟರಲ್ಲಿ ಯುವತಿ ಮದುವೆಗೆ ನಿರಾಕರಿಸಿದ್ದಾಳೆ. ಯುವತಿಯ ದಿಢೀರ್‌ ನಿರ್ಧಾರದಿಂದಾಗಿ ತಬ್ಬಿಬ್ಬಾದ ಕುಟುಂಬಸ್ಥರು ಎಷ್ಟೇ ತಿಳಿ ಹೇಳಿದರೂ ತನ್ನ ಪಟ್ಟು ಬಿಡದ ಆಕೆ  ಮದುವೆಗೆ ನಿರಾಕರಿಸಿದ್ದಾಳೆ.

ಪ್ರಕರಣ ಪೊಲೀಸ್‌ ಠಾಣೆಯ ಮೆಟ್ಟಲೇರಿದ್ದು ರಾಜಿ ಪಂಚಾಯಿತಿ ನಡೆಸಿದರೂ ಯುವತಿ ಮಾತ್ರ ತನ್ನ ಹಠ ಬಿಡದೆ  ಮದುವೆಯಾಗುವುದೇ ಇಲ್ಲ ಎಂದು ಪಟ್ಟು ಹಿಡಿದು ಕೂತಿದ್ದಾಳೆ.

ಇದೀಗ  ಮದುವೆಗೆ ಸಿದ್ಧತೆ ನಡೆಸಿದ್ದ ಯುವಕನ ಕಡೆಯವರು ತಮಿಳುನಾಡಿನಲ್ಲಿರುವ ಸಂಬಂಧಿಕರೊಬ್ಬರ ಪುತ್ರಿಯನ್ನು ವಿವಾಹಕ್ಕೆ ಒಪ್ಪಿಸಿ, ಅದೇ ದಿನ ಮಡಿಕೇರಿಯ ದೇವಾಲಯವೊಂದರಲ್ಲಿ ಅದೇ ಮುಹೂರ್ತದಲ್ಲಿ ವಿವಾಹ ನಡೆಸಿದ್ದಾರೆ.

Join Whatsapp
Exit mobile version