ಭೋಪಾಲ್: ಗ್ವಾಲಿಯರ್ ಏರ್ ಫೋರ್ಸ್ ಬೇಸ್ ನಿಂದ ಟೇಕಾಫ್ ಆಗಿದ್ದ ಭಾರತೀಯ ವಾಯುಪಡೆಯ ಎರಡು ಯುದ್ಧ ವಿಮಾನಗಳು – ಸುಖೋಯ್ ಸು -30 ಮತ್ತು ಮಿರಾಜ್ 2000 – ತರಬೇತಿ ವೇಳೆ ಮಧ್ಯಪ್ರದೇಶದ ಮೊರೆನಾದಲ್ಲಿ ಪತನಗೊಂಡಿವೆ.
ಮೊರೆನಾದಲ್ಲಿ ಸ್ಥಳೀಯರು ಚಿತ್ರೀಕರಿಸಿದ ವೀಡಿಯೋ ದೃಶ್ಯಗಳಲ್ಲಿ ಚದುರಿ ಬಿದ್ದಿರುವ ವಿಮಾನದ ಅವಶೇಷಗಳನ್ನು ಕಾಣಬಹುದಾಗಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ.
![](https://prasthutha.com/wp-content/uploads/2023/01/flight21.jpg)
ರಾಜಸ್ಥಾನದ ಭರತ್ಪುರದಲ್ಲಿ ಚಾರ್ಟರ್ಡ್ ವಿಮಾನವೊಂದು ಶನಿವಾರ ಪತನಗೊಂಡಿದೆ.
ಸ್ಥಳಕ್ಕೆ ಪೊಲೀಸರು ಮತ್ತು ಆಡಳಿತ ಅಧಿಕಾರಿಗಳು ಭೇಟಿ ನೀಡಿದ್ದು, ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಲೋಕ್ ರಂಜನ್ ಮಾಹಿತಿ ನೀಡಿದ್ದಾರೆ.