Home ಕ್ರೀಡೆ ಡ್ಯಾನಿಷ್‌ ಓಪನ್‌ 2022 | ಚಿನ್ನ-ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ ವೇದಾಂತ್‌ ಮಾಧವನ್‌

ಡ್ಯಾನಿಷ್‌ ಓಪನ್‌ 2022 | ಚಿನ್ನ-ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ ವೇದಾಂತ್‌ ಮಾಧವನ್‌

ಖ್ಯಾತ ಬಹುಭಾಷಾ ನಟ ಆರ್‌. ಮಾಧವನ್‌ ಪುತ್ರ ವೇದಾಂತ್‌ ಮಾಧವನ್‌, ಡ್ಯಾನಿಶ್ ಓಪನ್ 2022, ಈಜು ಸ್ಪರ್ಧೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಪದಕಗಳನ್ನು ಗೆದ್ದು ಸಂಭ್ರಮಿಸಿದ್ದಾರೆ. ಡ್ಯಾನಿಶ್ ಓಪನ್‌ನ ಈಜು ಸ್ಪರ್ಧೆಯ 800 ಮೀ. ವಿಭಾಗದಲ್ಲಿ 8:17.28 ನಿಮಿಷದಲ್ಲಿ ಗುರಿ ತಲುಪಿದ ವೇದಾಂತ್‌ ಚಿನ್ನದ ಪದಕ ಗೆದ್ದಿದ್ದಾರೆ.

ವೇದಾಂತ್ ಪದಕಕ್ಕೆ ಕೊರಳೊಡ್ಡುವ ವೀಡಿಯೋವನ್ನು ನಟ ಮಾಧವನ್‌ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಗೋಲ್ಡ್…. ನಿಮ್ಮೆಲ್ಲರ ಆಶೀರ್ವಾದ ಮತ್ತು ದೇವರ ಕೃಪೆಯಿಂದ ವಿಜಯದ ಓಟ ಮುಂದುವರಿದಿದೆ. ಇಂದು ವೇದಾಂತ ಮಾಧವನ್‌ಗೆ 800 ಮೀಟರ್‌ನಲ್ಲಿ ಲಭಿಸಿದ ಚಿನ್ನವಾಗಿದೆ. ನಾನು ವಿನಮ್ರನಾಗಿದ್ದೇನೆ” ಎಂದು ಮಾಧವನ್‌ ಬರೆದಿದ್ದಾರೆ. ವೇದಾಂತ್‌ ಅವರ ಕೋಚ್, ಈಜು ಫೆಡರೇಶನ್ ಮತ್ತು ಸಂಪೂರ್ಣ ತಂಡಕ್ಕೆ ಮಾಧವನ್‌ ಧನ್ಯವಾದ ಹೇಳಿದ್ದಾರೆ.

ಇದೇ ಕೂಟದ ಶನಿವಾರದ ಸ್ಪರ್ಧೆಯಲ್ಲಿ ವೇದಾಂತ್‌ ಮಾಧವನ್‌ ಬೆಳ್ಳಿ ಪದಕ ಗೆದ್ದಿದ್ದರು. 1500 ಮೀಟರ್ ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ 15:57:86 ನಿಮಿಷದಲ್ಲಿ ವೇದಾಂತ್‌ ಗುರಿ ತಲುಪಿದ್ದರು. ಆರ್ ಮಾಧವನ್ ಪೋಸ್ಟ್ ಅನ್ನು ಹಂಚಿಕೊಂಡಿರುವ ಪೋಸ್ಟ್‌ಗೆ ಅವರ ಉದ್ಯಮದ ಸ್ನೇಹಿತರು ಮತ್ತು ಅಭಿಮಾನಿಗಳು ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ.

Join Whatsapp
Exit mobile version