Home ಟಾಪ್ ಸುದ್ದಿಗಳು ಪೆಟ್ರೋಲ್ ಬೆಲೆ 100ರ ಗಡಿ ದಾಟಿದರೂ ಮಾತನಾಡದ ಬಿಜೆಪಿ ‘ಲವ್ ಜಿಹಾದ್’ ಹಿಂದೆ ಬಿದ್ದಿದೆ :...

ಪೆಟ್ರೋಲ್ ಬೆಲೆ 100ರ ಗಡಿ ದಾಟಿದರೂ ಮಾತನಾಡದ ಬಿಜೆಪಿ ‘ಲವ್ ಜಿಹಾದ್’ ಹಿಂದೆ ಬಿದ್ದಿದೆ : ವಿಜಯ ರಾಘವನ್

ಪಟ್ರೋಲ್ ದರ ರೂ.100ರ ಗಡಿ ದಾಟಿದರೂ, ಬಿಜೆಪಿ ಬೆಲೆ ಏರಿಕೆ ಬಗ್ಗೆ ಮಾತನಾಡುವುದಿಲ್ಲ, ಆದರೆ ಇಲ್ಲದ ‘ಲವ್ ಜಿಹಾದ್’ ಬಗ್ಗೆ ಪ್ರೊಪಗಾಂಡ ಮಾಡುತ್ತದೆ ಎಂದು ಕೇರಳದ ಸಿಪಿಎಂ ರಾಜ್ಯ ಕಾರ್ಯದರ್ಶಿ ಎ. ವಿಜಯ ರಾಘವನ್ ಹೇಳಿದ್ದಾರೆ.

ಅಸ್ತಿತ್ವದಲ್ಲಿ ಇಲ್ಲದ ‘ಲವ್ ಜಿಹಾದ್’ ಎನ್ನುವುದು ಸಂಘಪರಿವಾರದ ಸೃಷ್ಟಿಯಾಗಿದ್ದು, ಇದು ಕೆಲವು ಸಮುದಾಯಗಳನ್ನು ಗುರಿಯಾಗಿಸಲು ಸಂಘಪರಿವಾರ ಬಳಸುವ ಪ್ರೊಪಗಾಂಡಾ ಎಂದು ಅವರು ತಿಳಿಸಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಅವರು ಭಾನುವಾರ ಬಿಜೆಪಿ ರ್ಯಾಲಿಯಲ್ಲಿ ‘ಲವ್ ಜಿಹಾದ್’ಅನ್ನು ಕೇರಳ ಪೋಷಿಸುತ್ತಿದೆ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಯಿಸಿದ ವಿಜಯರಾಘವನ್, “ಲವ್ ಜಿಹಾದ್ ಎನ್ನುವುದು ಅಸ್ತಿತ್ವದಲ್ಲಿಯೇ ಇಲ್ಲ; ಮುಸ್ಲಿಮರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವ ಸಲುವಾಗಿ ಸಂಘಪರಿವಾರ ಇದನ್ನು ಪ್ರೊಪಗಂಡಾ ಮಾಡುತ್ತಿದೆ. ಬಿಜೆಪಿ ಸಮಾವೇಶದಲ್ಲಿ ಆದಿತ್ಯನಾಥ್ ತಮ್ಮ ಕೋಮು ಅಜೆಂಡಾವನ್ನು ಘೋಷಿಸಿದ್ದಾರೆ. ‘ಲವ್ ಜಿಹಾದ್’ ಎನ್ನುವುದು ಸಂಘಪರಿವಾರ ರಚಿಸಿದ ‘ಕ್ಯಾಂಪೇನ್ ಟೂಲ್‌’ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶ ಸೇರಿದಂತೆ ಬಿಜೆಪಿ ಆಡಳಿತದ ಕೆಲವು ರಾಜ್ಯಗಳು ‘ಲವ್ ಜಿಹಾದ್’ ನಿಷೇಧಕ್ಕೆ ಕಾನೂನನ್ನು ಜಾರಿಗೊಳಿಸಿವೆ. ಆದರೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂತಹ ಅನಾಗರಿಕ ಕಾನೂನುಗಳನ್ನು ಜಾರಿಗೊಳಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಸಮಾವೇಶದಲ್ಲಿ ಯೋಗಿ ತಮ್ಮ ಕೋಮುವಾದವನ್ನಷ್ಟೇ ಘೋಷಿಸಿದ್ದಾರೆ. ಆದರೆ ವಾಸ್ತವಿಕ ಸಮಸ್ಯೆಗಳು ಕುರಿತಾಗಿ ಯಾವ ಬಿಜೆಪಿ ನಾಯಕರೂ ಮಾತಾಡುವುದಿಲ್ಲ. ದೇಶದಲ್ಲಿ ಪೆಟ್ರೋಲ್ ದರ ಶತಕದ ಗಡಿ ದಾಟಿದೆ. ನಿರುದ್ಯೋಗ ಪ್ರಮಾಣ ಹೆಚ್ಚಳವಾಗಿದೆ. ಆದರೆ ಬಿಜೆಪಿ ಮಾತ್ರ ‘ಲವ್ ಜಿಹಾದ್’ ಬಗ್ಗೆ ಮಾತ್ರ ಮಾತಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Join Whatsapp
Exit mobile version