ಮಲಪ್ಪುರಂ: ಕೇರಳದ ಜಾಮಿಯಾ ನೂರಿಯಾ ಅರೇಬಿಕ್ ಕಾಲೇಜ್ ಪಟ್ಟಿಕ್ಕಾಡ್‌ನ ಎರಡನೇ ವರ್ಷದ ವಿದ್ಯಾರ್ಥಿ ಮುಹಮ್ಮದ್ ಜಸೀಮ್ ಅ ಅತಿ ಉದ್ದದ ಕೈಬರಹದ ಕುರ್‌ಆನ್ ಬರೆದು ಹೊಸ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ. ಸಾಧನೆಯನ್ನು ಅಧಿಕಾರಿಗಳು ಗುರುತಿಸಿದ್ದು, ಗಿನ್ನೆಸ್ ಕೇರಳ ಪ್ರತಿನಿಧಿಗಳು ಪ್ರಮಾಣಪತ್ರ ಹಸ್ತಾಂತರ ಮಾಡಿದ್ದಾರೆ. ‘ಅಗ್ರಾಹ್’ ಅಧ್ಯಕ್ಷ ಗಿನ್ನೆಸ್ ಸತ್ತಾರ್ ಅಡೂರು ಪ್ರಮಾಣ ಪತ್ರ ನೀಡಿದ್ದಾರೆ. ಶಾಸಕ ಹಮೀದ್ ಮಾಸ್ಟರ್, ಪ್ರಾಧ್ಯಾಪಕ ಉಸ್ತಾದ್ ಝಿಯಾವುದ್ದೀನ್ ಫೈಝಿ ಮೇಲ್ಮುರಿ, ಉಸ್ತಾದ್ ಸಲಾವುದ್ದೀನ್ ಫೈಝಿ ವೆನ್ನಿಯೂರು, ಸಯ್ಯದ್ ಮುನವ್ವರ ಅಲಿ ಶಿಹಾಬ್ ತಂಗಳ್ ಹಾಗೂ ಸಯ್ಯಿದ್ ಮುನವ್ವರ ಅಲಿ ಶಿಹಾಬ್ ತಂಗಳ್ ಉಪಸ್ಥಿತರಿದ್ದರು. ವಿಶ್ವ ಅರೇಬಿಕ್ ದಿನದಂದು ಗಿನ್ನಿಸ್ ದಾಖಲೆ ಪ್ರಮಾಣ ಪತ್ರ ನೀಡಲಾಗಿದ್ದು ವಿಶೇಷ.
ದಾಖಲೆಯ ಪ್ರಕಾರ, ಈಜಿಪ್ಟ್ ಪ್ರಜೆ ಮೊಹಮ್ಮದ್ ಗೇಬ್ರಿಯಲ್ ಗಿನ್ನೆಸ್ ವಿಶ್ವ ದಾಖಲೆಯಲ್ಲಿ 700 ಮೀಟರ್ ಕೈಬರಹದ ಕುರ್‌ಆನ್ ಅನ್ನು ದಾಖಲಿಸಿದ್ದರು. ಜಸೀಮ್ 1106 ಮೀಟರ್ ಉದ್ದದ ಕುರ್‌ಆನ್ ಕ್ಯಾಲಿಗ್ರಫಿ ಬರೆದು ದಾಖಲೆಯನ್ನು ಮುರಿದು ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಡಿಸೆಂಬರ್ 17, 2022 ರಂದು ಕ್ಯಾಲಿಕಟ್ ಬೀಚ್‌ನಲ್ಲಿ ಜಾಮಿಯಾ ನೂರಿಯಾ ಅರೇಬಿಕ್ ಕಾಲೇಜಿನ ನೂರುಲ್ ಉಲಮಾ ವಿದ್ಯಾರ್ಥಿಗಳ ಸಂಘದಿಂದ ಈ ಕುರ್‌ಆನ್ ಪ್ರದರ್ಶನವನ್ನು ಏರ್ಪಡಿಸಲಾಯಿತು. ಸಯ್ಯದ್ ಮುನವ್ವರಲಿ ಶಿಹಾಬ್, ಸಯ್ಯದ್ ಸ್ವಾದಿಕ್ ಅಲಿ ಶಿಹಾಬ್ ಸೇರಿದಂತೆ ಅಧಿಕೃತ ಪ್ರತಿನಿಧಿಗಳು , ಎಂ.ಪಿ.ಅಬ್ದುಲ್ವಹಾಬ್, ಆಗ್ರಾದ ಅಧ್ಯಕ್ಷರಾದ ಗಿನ್ನಸ್ ಸತ್ತಾರ್ ಅಡೂರ್, ಮತ್ತು ಕಾರ್ಯದರ್ಶಿ ಗಿನ್ನಸ್ ಸುನಿಲ್ ಜೋಸೆಫ್, ಸನ್ಮಾನ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ತಿರೂರಂಙಾಡಿ ಮೂಲದ ಮುಹಮ್ಮದ್ ಜಸೀಮ್ ಕೋವಿಡ್-19 ಸಾಂಕ್ರಾಮಿಕ ರೋಗದ ಎರಡು ವರ್ಷಗಳ ಲಾಕ್‌ಡೌನ್ ಅವಧಿಯಲ್ಲಿ ಈ ಸಾಧನೆ ಮಾಡಿದ್ದಾರೆ. ಕುರಾನ್ 325,384 ಅರೇಬಿಕ್ ಅಕ್ಷರಗಳು, 77,437 ಅರೇಬಿಕ್ ಪದಗಳು, 114 ಅಧ್ಯಾಯಗಳು ಮತ್ತು 6348 ಸೂಕ್ತಗಳನ್ನು ಒಳಗೊಂಡಿದೆ. ಪ್ರತಿ ಜುಜ್ (ವಿಭಾಗ) ಸುಮಾರು 65-75 ಪುಟಗಳಲ್ಲಿ ಪೂರ್ಣಗೊಂಡಿದೆ. ಒಂದು ಪುಟದಲ್ಲಿ 9-10 ಸಾಲುಗಳು ಒಳಗೊಂಡಿಸಿದ್ದಾರೆ.
118.3 ಕಿಲೋಗ್ರಾಂಗಳಷ್ಟು ತೂಕವಿರುವ ಕೈಬರಹದ ಕುರ್‌ಆನ್ ಅನ್ನು ನಿಖರವಾಗಿ ನಕಲು ಮಾಡಲಾಗಿದೆ. ಪ್ರತಿ ಪುಟವು 75cm ಎತ್ತರ ಮತ್ತು 34cm ಅಗಲವನ್ನು ಹೊಂದಿದೆ.
ಚಿಕ್ಕ ವಯಸ್ಸಿನಿಂದಲೇ, ಜಸೀಮ್ ಕಲಾತ್ಮಕ ಸಾಮರ್ಥ್ಯಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸಿದರು, ವಿಶೇಷವಾಗಿ ಅವರು ತಮ್ಮ ಹಿರಿಯ ಸಹೋದರ ಅಯೂಬ್ ಅವರ ವರ್ಣಚಿತ್ರಗಳನ್ನು ನೋಡಿ ಸ್ಫೂರ್ತಿ ಪಡೆದರು. ತನ್ನ ಪ್ರಾಥಮಿಕ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ
ಅವರು ತಿರುರ್‌ನಲ್ಲಿ ಅಲ್ ಇಕಾಲು ದರ್ಸ್‌ನಲ್ಲಿ ಧಾರ್ಮಿಕ ಅಧ್ಯಯನವನ್ನು ನಡೆಸಿದರು. ಹೆಸರಾಂತ ವಿದ್ವಾಂಸ ಮತ್ತು ವಾಗ್ಮಿ ಸ್ವಲಾಹುದ್ದೀನ್ ಫೈಝಿ ವೆನ್ನಿಯೂರ್ ಅವರು ಕ್ಯಾಲಿಗ್ರಫಿಗೆ ತಮ್ಮ ದೀಕ್ಷೆಯಲ್ಲಿ ಮಾರ್ಗದರ್ಶನ ನೀಡಿದರು. ಅವರು ಈ ಸಾಂಪ್ರದಾಯಿಕ ಇಸ್ಲಾಮಿಕ್ ಕಲಾ ಪ್ರಕಾರದಲ್ಲಿ ಅವರ ಮೊದಲ ಹೆಜ್ಜೆಗಳನ್ನು ಗುರುತಿಸಿದರು.
ಜಸೀಮ್ ಈ ಸಾಧನೆಗಾಗಿ AGRH (Aghrah) ನ ಕಾರ್ಯದರ್ಶಿ ಸುನಿಲ್ ಜೋಸೆಫ್ ಅವರಿಂದ ತಾಂತ್ರಿಕ ನೆರವು ಪಡೆದರು.
ಜಸೀಮ್ ಅವರು ನಾಲ್ಕನೇ ತರಗತಿಯ ಶಿಕ್ಷಣದ ನಂತರ ಅರೇಬಿಕ್ ಕ್ಯಾಲಿಗ್ರಫಿಯಲ್ಲಿ ಪ್ರಾವೀಣ್ಯತೆ ಪಡೆದಿದ್ದರು. ಅವರ ಕಲಾ ಪಯಣವು ಕ್ಯಾಲಿಗ್ರಫಿಯ ಹಂತಗಳೊಂದಿಗೆ ಪ್ರಾರಂಭವಾಯಿತು, ಅರಬಿಕ್ ಕಾಲೇಜಿನ ಹಂತದಲ್ಲಿ ಅವರ ಕಲಾ ಪ್ರತಿಭೆಯು ಅನಾವರಣಗೊಂಡಿತು.
ಮಾತುಮ್ಮಲ್ ಮುಹ್ಯುದ್ದೀನ್ ಮತ್ತು ಆಸಿಯಾ ದಂಪತಿ ಪುತ್ರ ಜಸೀಂ ಅವರ ಸಾಧನೆಯಿಂದ ಹರ್ಷಚಿತ್ತರಾಗಿದ್ದಾರೆ.