Home ಟಾಪ್ ಸುದ್ದಿಗಳು ಇಂಗ್ಲೆಂಡ್ ನಲ್ಲಿ ರಾಕೆಟ್ ವೇಗದಲ್ಲಿ ಹರಡುತ್ತಿದೆ ಹೊಸ ರೂಪಾಂತರಿತ ಕೊರೊನ ವೈರಸ್ | ಲಂಡನ್ ನಲ್ಲಿ...

ಇಂಗ್ಲೆಂಡ್ ನಲ್ಲಿ ರಾಕೆಟ್ ವೇಗದಲ್ಲಿ ಹರಡುತ್ತಿದೆ ಹೊಸ ರೂಪಾಂತರಿತ ಕೊರೊನ ವೈರಸ್ | ಲಂಡನ್ ನಲ್ಲಿ ಲಾಕ್ ಡೌನ್

ಲಂಡನ್ : ಇಂಗ್ಲೆಂಡ್ ನಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ರೂಪಾಂತರಿತ ಕೊರೊನ ವೈರಸ್ ನಿಯಂತ್ರಣ ಮೀರಿ ವ್ಯಾಪಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿರುವ ಯುಕೆ ಆರೋಗ್ಯ ಸಚಿವ ಮ್ಯಾಟ್ ಹ್ಯಾನ್ ಕೊಕ್, ಮತ್ತೊಂದು ಸುತ್ತಿನ ಲಾಕ್ ಡೌನ್ ತಿಂಗಳ ವರೆಗೆ ಮುಂದುವರಿಯುವ ಎಚ್ಚರಿಕೆ ನೀಡಿದ್ದಾರೆ.

ಲಂಡನ್ ಮತ್ತು ಆಗ್ನೇಯ ಇಂಗ್ಲೆಂಡ್ ನಲ್ಲಿ ಭಾನುವಾರ ಹೊಸ ಲಾಕ್ ಡೌನ್ ಘೋಷಿಸಲಾಗಿದ್ದು, 16 ಮಿಲಿಯನ್ ಬ್ರಿಟನ್ ನಿವಾಸಿಗಳು ಈಗ ಮನೆಯೊಳಗೆ ಉಳಿಯಲಿದ್ದಾರೆ. ಕ್ರಿಸ್ ಮಸ್ ಹಬ್ಬದ ವೇಳೆ ನಿಯಮಗಳನ್ನು ಸಡಿಲಗೊಳಿಸುವ ಸರಕಾರದ ಈ ಹಿಂದಿನ ನಿರ್ಧಾರವನ್ನು ಕೈಬಿಡಲಾಗಿದೆ.

ಕ್ರಿಸ್ ಮಸ್ ವೇಳೆ ಜನರು ಕೊರೊನ ವೈರಸ್ ಸೋಂಕಿತರ ಪ್ರದೇಶಗಳಿಗೆ ಭೇಟಿ ನೀಡದಂತೆ ಜನರಿಗೆ ಸೂಚಿಸಲಾಗಿದೆ.  

ಹೊಸ ಪ್ರಕರಣಗಳು ರಾಕೆಟ್ ವೇಗದಲ್ಲಿ ಏರುತ್ತಿವೆ, ಹೀಗಾಗಿ ನಾವು ತುಂಬಾ ಮುಂದೆ ಹೋಗಬೇಕಾಗಿದೆ. ಲಸಿಕೆ ಜಾರಿಗೊಳಿಸುವವರೆಗೆ ಇದನ್ನು ನಿಯಂತ್ರಣದಲ್ಲಿಡುವುದು ಕಷ್ಟವಾಗಲಿದೆ ಎಂದು ನನಗನಿಸುತ್ತಿದೆ ಎಂದು ಮ್ಯಾಟ್ ಹೇಳಿದ್ದಾರೆ.

Join Whatsapp
Exit mobile version