Home ಟಾಪ್ ಸುದ್ದಿಗಳು ಬ್ರಿಟನ್‌ ಪ್ರಧಾನಿಯಾಗಿ ಲಿಜ್ ಟ್ರಸ್ ಆಯ್ಕೆ: ಭಾರತ ಮೂಲದ ರಿಷಿ ಸುನಕ್‌ ಗೆ ಸೋಲು

ಬ್ರಿಟನ್‌ ಪ್ರಧಾನಿಯಾಗಿ ಲಿಜ್ ಟ್ರಸ್ ಆಯ್ಕೆ: ಭಾರತ ಮೂಲದ ರಿಷಿ ಸುನಕ್‌ ಗೆ ಸೋಲು

ಬ್ರಿಟನ್‌ : ಬ್ರಿಟನ್ ನ ನೂತನ ಪ್ರಧಾನಿಯಾಗಿ ವಿದೇಶಾಂಗ ಸಚಿವೆಯಾಗಿದ್ದ ಲಿಜ್‌ ಟ್ರಸ್‌ ಅವರು ಆಯ್ಕೆಯಾಗಿದ್ದಾರೆ. ಅವರು ಭಾರತ ಮೂಲದ ತನ್ನ ಪ್ರತಿಸ್ಪರ್ಧಿ ರಿಷಿ ಸುನಕ್ ಅವರನ್ನು ಸೋಲಿಸಿ ಪ್ರಧಾನಿ ಹುದ್ದೆಗೇರಿದ್ದಾರೆ. ಇದರೊಂದಿಗೆ ಅವರು ಬ್ರಿಟನ್’ನ ಮೂರನೇ ಮಹಿಳಾ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವಿದೇಶಾಂಗ ಸಚಿವರಾಗಿದ್ದ ಲಿಝ್ ಟ್ರಸ್ ಅವರು ಮಾಜಿ ಹಣಕಾಸು ಸಚಿವ ರಿಷಿ ಸುನಕ್ ಅವರನ್ನು ಸೋಲಿಸಿ ಕನ್ಸರ್ವೇಟಿಕ್ ಪಕ್ಷದ ಮುಖ್ಯಸ್ಥೆ ಮತ್ತು ಬ್ರಿಟನ್’ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

ಬ್ರಿಟನ್ ಜನತೆಯ ಜೀವನ ವೆಚ್ಚದ ಬಿಕ್ಕಟ್ಟು, ಕೈಗಾರಿಕ ಕ್ಷೇತ್ರದಲ್ಲಿ ಅಶಾಂತಿ ಮತ್ತು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಸಮಯದಲ್ಲಿ ಲಿಝ್ ಅವರು ಅಧಿಕಾರಿದ ಚುಕ್ಕಾಣಿ ಹಿಡಿಯಲು ಸಿದ್ಧರಾಗಿರುವುದು ವಿಶೇಷ.

ಕೊನೆಯ ಸುತ್ತಿನ ವರೆಗೂ ಮುನ್ನಡೆಯನ್ನು ಕಾಯ್ದೆಕೊಂಡಿದ್ದ ರಿಷಿ ಸುನಕ್ ಅವರು ಪ್ರಧಾನಿ ಹುದ್ದೆಗೇರುವ ನಿರೀಕ್ಷೆಯನ್ನು ಜೀವಂತವಾಗಿರಿಸಿದ್ದರು. ಈ ಮಧ್ಯೆ ಪ್ರಚಾರದ ಸಂದರ್ಭದಲ್ಲಿ ಲಿಝ್ ಟ್ರಸ್ ಅವರು ಬ್ರಿಟನ್ ಜನತೆಯ ಮುಂದೆ ಕೆಲವು ಅಗತ್ಯ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸುವ ಯೋಜನೆಯನ್ನು ಪರಿಚಯಿಸಿದ ಪರಿಣಾಮ ಮತದಾರರು ಲಿಝ್ ಪರವಾಗಿ ನಿಂತಿದ್ದರು. ಇದು ಅವರ ಅಭೂತಪೂರ್ವ ವಿಜಯಕ್ಕೆ ಮೈಲಿಗಲ್ಲು ಎಂದು ರಾಜಕೀಯ ವಿಶ್ಲೇಷಕರು ತಿಳಿಸಿದ್ದಾರೆ.

Join Whatsapp
Exit mobile version