Home ಟಾಪ್ ಸುದ್ದಿಗಳು ಕರ್ನಾಟಕದ 25 ಕ್ಷೇತ್ರಗಳಿಗೆ BSP ಅಭ್ಯರ್ಥಿಗಳ ಪಟ್ಟಿ ಪ್ರಕಟ

ಕರ್ನಾಟಕದ 25 ಕ್ಷೇತ್ರಗಳಿಗೆ BSP ಅಭ್ಯರ್ಥಿಗಳ ಪಟ್ಟಿ ಪ್ರಕಟ

ಬೆಂಗಳೂರು: ಕರ್ನಾಟಕದ 25 ಲೋಕಸಭಾ ಕ್ಷೇತ್ರಗಳಿಗೆ (BSP) ಬಹುಜನ ಸಮಾಜ ಪಾರ್ಟಿಯಿಂದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಪಕ್ಷದ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದರು.

ಬಾಗಲಕೋಟೆ-ವೈ.ಸಿ.ಕಾಂಬಳೆ, ಬೆಂಗಳೂರು ಕೇಂದ್ರ- ಸತೀಶ್ ಚಂದ್ರ ಎಂ. ಬೆಂಗಳೂರು ಉತ್ತರ-ಚಿಕ್ಕಣ್ಣ,ಬೆಂಗಳೂರು ಗ್ರಾಮಾಂತರ – ಡಾ.ಚಿನ್ನಪ್ಪ ವೈ ಚಿಕ್ಕಹಾಗಡೆ, ಬೆಂಗಳೂರು ದಕ್ಷಿಣ – ಮಣ್ಣೂರ್ ನಾಗರಾಜು,ಬೆಳಗಾವಿ- ಯಮನಪ್ಪ ತಳವಾರ,ಬಳ್ಳಾರಿ – ಶಕುಂತಲಾ, ಬೀದರ್-ಪುಟ್ಟರಾಜು.ಹೆಚ್, ಬಿಜಾಪುರ- ಕಲ್ಲಪ್ಪ.ಆರ್.ತೊರವಿ, ಚಾಮರಾಜನಗರ (ಎಸ್.ಸಿ) ಸಿ.ಮಹದೇವಯ್ಯ, ಚಿಕ್ಕಬಳ್ಳಾಪುರ- ಆರ್.ಮುನಿಯಪ್ಪ, ಚಿತ್ರದುರ್ಗ ಎಸ್.ಸಿ.- ಅಶೋಕ್ ಚಕ್ರವರ್ತಿ, ದಕ್ಷಿಣ ಕನ್ನಡ-ಕಾಂತಪ್ಪ ಅಳಂಗಾರ್, ದಾವಣಗೆರೆ-ಮಲ್ಲೇಶ್.ಹೆಚ್,ಧಾರವಾಡ-ಶೋಭ ಬಳ್ಳಾರಿ,ಗುಲ್ಬರ್ಗ ಎಸ್.ಸಿ-ಹುಚ್ಚಪ್ಪ ವಟಾರ, ಹಾಸನ- ಗಂಗಾಧರ್ ಬಹುಜನ್, ಹಾವೇರಿ- ಮರಿಯಣ್ಣನವರ,ಕೋಲಾರ ಎಸ್.ಸಿ.- ಮೈಲಾರಪ್ಪ, ಮಂಡ್ಯ-ಶಿವಶಂಕರ್,ಮೈಸೂರು-ಚಂದ್ರ ಶೇಖರ್.ಪಿ. ಶಿವಮೊಗ್ಗ-ಎ.ಡಿ.ಶಿವಪ್ಪ,ತುಮಕೂರು-ರಾಜಸಿಂಹ ಜೆ.ಎನ್,ಉಡುಪಿ-ಚಿಕ್ಕಮಗಳೂರು- ಕೆ.ಟಿ.ರಾಧಾಕೃಷ್ಣ ಅವರನ್ನು ಅಧಿಕೃತ ಅಭ್ಯರ್ಥಿಗಳನ್ನಾಗಿ ಘೋಷಣೆ ಮಾಡಲಾಗಿದೆ ಎಂದು ಮುನಿಯಪ್ಪ ತಿಳಿಸಿದರು.

ಬಹುಜನ ಸಮಾಜ ಪಕ್ಷ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ನಾಯಕಿ ಮಾಯಾವತಿಯವರ ತೀರ್ಮಾನದಂತೆ ಎನ್.ಡಿ.ಎ ಹಾಗೂ ಇಂಡಿಯಾ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಸಮಾಜಿಕ ಜಾಲತಾಣಗಳಲ್ಲಿ ಬಹುಜನ ಸಮಾಜ ಪಕ್ಷ ಒಳ ಒಪ್ಪಂದ ಮಾಡಿಕೊಂಡಿದೆ ಎಂಬು ಸತ್ಯಕ್ಕೆ ದೂರವಾದ ಮಾತು ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ನಾಳೆಯಿಂದಲೇ ಪಕ್ಷದ ವತಿಯಿಂದ ಪ್ರಚಾರ ಕಾರ್ಯವನ್ನು ಹಮ್ಮಿಕೊಳ್ಳಲಾಗುವುದು ಎಂದು ಮುನಿಯಪ್ಪ ತಿಳಿಸಿದರು.

Join Whatsapp
Exit mobile version