Home ಟಾಪ್ ಸುದ್ದಿಗಳು ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ಪಡೆಯಲು ED, CBI ಬಳಸಿದ BJP: ಖರ್ಗೆ

ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ಪಡೆಯಲು ED, CBI ಬಳಸಿದ BJP: ಖರ್ಗೆ

ನವದೆಹಲಿ: ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ಪಡೆಯಲು ಬಿಜೆಪಿ ತನಿಖಾ ಸಂಸ್ಥೆಗಳಾದ ಇ.ಡಿ ಮತ್ತು ಸಿಬಿಐ ಅನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಮಾಧ್ಯಮ ವರದಿಗಳನ್ನು ಉಲ್ಲೇಖಸಿದ ಅವರು, ‘ಇದು ಹೆಚ್ಚಿನ ದೇಣಿಗೆ ಪಡೆಯುವುದಕ್ಕಾಗಿ ಮಾಡಿದ ಬ್ಲ್ಯಾಕ್‌ಮೇಲ್ ಅಥವಾ ಸುಲಿಗೆ ಅಥವಾ ಲೂಟಿಯೇ ಎಂದು ಪ್ರಶ್ನಿಸಿದ್ದಾರೆ.

ತನಿಖಾ ಸಂಸ್ಥೆಗಳು ದಾಳಿ ನಡೆಸಿದ ಬಳಿಕ 15 ಕಂಪನಿಗಳು ಬಿಜೆಪಿಗೆ ದೇಣಿಗೆ ನೀಡಿರುವುದು ತನಿಖೆಯಿಂದ ಬಹಿರಂಗವಾಗಿದೆ. ಒಟ್ಟು 45 ಕಂಪನಿಗಳು ಸುಮಾರು ₹400 ಕೋಟಿಯನ್ನು ಬಿಜೆಪಿಗೆ ದೇಣಿಗೆ ರೂಪದಲ್ಲಿ ನೀಡಿವೆ ಎಂದು ಖರ್ಗೆ ಹೇಳಿದರು.

ಸರ್ವಾಧಿಕಾರಿ ಮೋದಿ ಸರ್ಕಾರವು ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿ ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಹಣ ಪಡೆಯುತ್ತಿದೆ ಎಂದರು.

‘ಪ್ರಜಾಪ್ರಭುತ್ವದ ಮೇಲೆ ಬಿಜೆಪಿಗೆ ನಂಬಿಕೆಯಿದ್ದರೆ ಪಕ್ಷದ ಹಣಕಾಸಿನ ಬಗ್ಗೆ ಸ್ವತಂತ್ರ ತನಿಖೆ ಮೂಲಕ ಶ್ವೇತಪತ್ರ ಹೊರಡಿಸಲಿ ಎಂದು ಕಾಂಗ್ರೆಸ್ ಅಧ್ಯಲ್ಷ ಇದೇ ವೇಳೆ ಸವಾಲು ಹಾಕಿದರು.

Join Whatsapp
Exit mobile version