Home ಟಾಪ್ ಸುದ್ದಿಗಳು ‘ಸೀಟ್ ಬೆಲ್ಟ್ ಅಲಾರ್ಮ್ ಸ್ಟಾಪರ್ಸ್’ ಅಕ್ರಮ ಮಾರಾಟ ತಡೆಯಲು ಸಾರಿಗೆ ಸಚಿವಾಲಯದಿಂದ ಪತ್ರ

‘ಸೀಟ್ ಬೆಲ್ಟ್ ಅಲಾರ್ಮ್ ಸ್ಟಾಪರ್ಸ್’ ಅಕ್ರಮ ಮಾರಾಟ ತಡೆಯಲು ಸಾರಿಗೆ ಸಚಿವಾಲಯದಿಂದ ಪತ್ರ

ನವದೆಹಲಿ: ಇ-ಕಾಮರ್ಸ್ ಕಂಪನಿಗಳು ತಮ್ಮ ಆನ್ ಲೈನ್ ನಲ್ಲಿ ‘ಕಾರ್ ಸೀಟ್ ಬಕಲ್ ಅಲಾರ್ಮ್ ಸ್ಟಾಪರ್’ ಮಾರಾಟವನ್ನು ನಿಲ್ಲಿಸುವಂತೆ ಕೋರಿ ರಸ್ತೆ ಸಾರಿಗೆ ಸಚಿವಾಲಯವು ಗ್ರಾಹಕ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದಿದೆ. ಅಂತಹ ವಸ್ತುಗಳ ತಯಾರಿಕೆ ಮತ್ತು ಮಾರಾಟವು ಸೆಂಟ್ರಲ್ ಮೋಟಾರ್ ವಾಹನ ಕಾಯಿದೆ ಅಡಿಯಲ್ಲಿ ಕಾನೂನುಬಾಹಿರವಾಗಿದೆ ಎಂದು ಅದು ತಿಳಿಸಿದೆ.

ಜುಲೈ 2019 ರಿಂದ ತಯಾರಿಸಲಾದ ಎಲ್ಲಾ ಕಾರುಗಳಿಗೆ ಸೀಟ್ ಬೆಲ್ಟ್ ರಿಮೈಂಡರ್  ಹೊಂದಿರುವುದನ್ನು ಸರ್ಕಾರ ಕಡ್ಡಾಯಗೊಳಿಸಿತ್ತು.

ಅಲರಾಂ ಶಬ್ದವನ್ನು ನಿಲ್ಲಿಸಲು ಬಕಲ್ ಗಳು ಕಾರ್ ಸೀಟ್-ಬೆಲ್ಟ್ ಬಕಲ್ ನ ಪ್ರತಿರೂಪವಾಗಿ ಕಾರ್ಯನಿರ್ವಹಿಸುತ್ತವೆ. ಇವುಗಳು ಇ-ಕಾಮರ್ಸ್ ಪ್ಲಾಟ್ ಫಾರ್ಮ್ ಗಳಲ್ಲಿ ಪ್ರತಿ ಘಟಕಕ್ಕೆ 250 ರೂ.ಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿದೆ.

Join Whatsapp
Exit mobile version