Home ಟಾಪ್ ಸುದ್ದಿಗಳು ಹಾಲು ಕರೆಯಲು ಹೋದ ಬಾಲಕರ ಮೇಲೆ ಚಿರತೆ ದಾಳಿ 

ಹಾಲು ಕರೆಯಲು ಹೋದ ಬಾಲಕರ ಮೇಲೆ ಚಿರತೆ ದಾಳಿ 

ತುಮಕೂರು: ಹಸುವಿನ  ಹಾಲು ಕರೆಯಲು ಹೋದ ಬಾಲಕರ ಮೇಲೆ ಚಿರತೆ ದಾಳಿ  ನಡೆಸಿದ  ಘಟನೆ ಕೊರಟಗೆರೆ ತಾಲೂಕಿನ ನೀಲಗೊಂಡನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಇರಕಸಂದ್ರ ಕಾಲೋನಿಯಲ್ಲಿ ನಡೆದಿದೆ.

ಧನುಷ್ (13) ಚೇತನ್ (15) ಚಿರತೆ ದಾಳಿಗೊಳಗಾದ ಬಾಲಕರು. ದನದ ಕೊಟ್ಟಿಗೆಗೆ  ಹಾಲು ಕರೆಯಲು ಹೋದಾಗ ದಾಳಿ ಮಾಡಿದ ಚಿರತೆ ಕಾಲು, ತೊಡೆ, ತಲೆ ಹಾಗೂ ಇತರ ಭಾಗಗಳಿಗೆ ಗಾಯಗೊಳಿಸಿದೆ. ಮಕ್ಕಳ ಕಿರುಚಾಟಕ್ಕೆ ಚಿರತೆ ಓಡಿ ಹೋಗಿದೆ.

ಗಾಯಗೊಂಡ ಬಾಲಕರನ್ನು ಆಸ್ಪತ್ರೆಗೆ ಸಾಗಿಸಲು  ತಂದೆ ಕೆಂಪರಾಜು 108 ಆಂಬುಲೆನ್ಸ್ ಗೆ ಕರೆ ಮಾಡಿದಾಗ ಕೊರಟಗೆರೆಯಲ್ಲಿ ಆಂಬ್ಯುಲೆನ್ಸ್ ಇಲ್ಲ, ತುಮಕೂರಿಗೆ ಕರೆ ಮಾಡಿ ಎಂದು ಅಧಿಕಾರಿಗಳು ಹೇಳಿದ್ದಾರೆ. ಹಾಗಾಗಿ ಖಾಸಗಿ ಕಾರಿನಲ್ಲೇ ಕೊರಟಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆದರೆ, ಆಸ್ಪತ್ರೆಗೆ ತಲುಪಿದಾಗ ಆವರಣದಲ್ಲೇ ಎರಡು ಆಂಬ್ಯುಲೆನ್ಸ್ ನಿಂತಿರುವುದನ್ನು  ಕಂಡ ಪೋಷಕರು ಆಕ್ರೋಶಗೊಂಡಿದ್ದಾರೆ. ಕೊರಟಗೆರೆ ತಾಲೂಕಿನ ಕೋಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Join Whatsapp
Exit mobile version