ಬೇತುಲ್: ಕೊಳವೆ ಬಾವಿಗೆ ಬಿದ್ದು 55 ಅಡಿ ಆಳದಲ್ಲಿ ಸಿಲುಕಿದ್ದ 8 ವರ್ಷದ ಬಾಲಕ ಕೊನೆಗೂ ಮೃತಪಟ್ಟಿದ್ದು, ರಕ್ಷಣಾ ಕಾರ್ಯಾಚರಣೆ ಮುಕ್ತಾಯಗೊಂಡಿದೆ.
ತನ್ಮಯ್ ಸಾಹು (8) ಮೃತ ಬಾಲಕ. ಡಿಸೆಂಬರ್ 6 ರಂದು ಆಟವಾಡುತ್ತಿದ್ದ ವೇಳೆ ಜಮೀನಿನಲ್ಲಿ ಇದ್ದ 55 ಅಡಿ ಆಳದ ಬೋರ್’ವೆಲ್’ಗೆ ತನ್ಮಯ್ ಬಿದ್ದಿದ್ದ. ಇದನ್ನು ನೋಡಿದ ಪೋಷಕರು ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ತನ್ಮಯ್ ಬಿದ್ದು ಒಂದು ಗಂಟೆಯಲ್ಲೇ ಸಿಬ್ಬಂದಿಯನ್ನು ಕರೆಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.
70 ಗಂಟೆಗೂ ಹೆಚ್ಚು ಕಾಲ ನಡೆದ ಕಾರ್ಯಾಚರಣೆ ಮಗುವನ್ನು ಕೊಳವೆ ಬಾವಿಯಿಂದ ಮೇಲೆ ಕರೆತರಲು ಯಶಸ್ವಿ ಆಗಿದೆ. ಆದರೆ ಮಗುವನ್ನು ಜೀವಂತವಾಗಿ ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
#WATCH | Madhya Pradesh | 8-year-old Tanmay Sahu who fell into a 55-ft deep borewell on December 6 in Mandavi village of Betul district, has been rescued. According to Betul district administration, the child has died pic.twitter.com/WtLnfq3apc
— ANI (@ANI) December 10, 2022