Home ಟಾಪ್ ಸುದ್ದಿಗಳು ಬೈಕ್ ಸವಾರನ ಮೇಲೆ ಚಿರತೆ ದಾಳಿ!

ಬೈಕ್ ಸವಾರನ ಮೇಲೆ ಚಿರತೆ ದಾಳಿ!

►ಕೊನೆಗೂ ಚಿರತೆ ಸೆರೆ

ಮೈಸೂರು: ಜಿಲ್ಲೆಯ ಕೃಷ್ಣರಾಜನಗರದಲ್ಲಿ ಚಿರತೆಯೊಂದು ಬೈಕ್ ಸವಾರ ಸೇರಿ ಕೆಲವರ ದಾಳಿ ಮಾಡಿ ಘಟನೆ ನಡೆದಿದ್ದು, ಗ್ರಾಮಸ್ಥರು ಆತಂಕಿತರಾಗಿದ್ದಾರೆ.


ಮೈಸೂರಿನ ಕೆ.ಆರ್.ನಗರದ ವಸತಿ ಬಡಾವಣೆಗೆ ಚಿರತೆಯೊಂದು ಆಗಮಿಸಿ ಎಲ್ಲೆಂದರೆಲ್ಲಿ ಓಡಾಡಿದೆ. ಚಿರತೆ ಕಂಡ ನಿವಾಸಿಗಳು ಕಂಗಾಲಾಗಿ ಭಯಭೀತರಾಗಿದ್ದಾರೆ. ಅಲ್ಲದೆ ಈ ದೃಶ್ಯ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ.


ವೀಡಿಯೋದಲ್ಲಿ ಚಿರತೆ ಮೊದಲು ವಸತಿ ಬಡಾವಣೆಗೆ ನುಗ್ಗಿ ಬಳಿಕ ರಸ್ತೆಯಲ್ಲಿ ಸಂಚರಿಸುತ್ತಿದ್ದ ದ್ವಿಚಕ್ರ ಸವಾರನ ಮೇಲೆ ದಾಳಿಮಾಡಿದೆ. ಘಟನೆಯ ಪರಿಣಾಮ ಇಬ್ಬರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿರತೆಯನ್ನು ಅರಣ್ಯ ಅಧಿಕಾರಿಗಳು ಹಾಗೂ ಸ್ಥಳೀಯ ನಿವಾಸಿಗಳು ಚಿರತೆಯನ್ನು ಸೆರೆಹಿಡಿದ್ದಾರೆ.

Join Whatsapp
Exit mobile version