Home ಟಾಪ್ ಸುದ್ದಿಗಳು ಸರ್ಕಾರಿ ಆಸ್ಪತ್ರೆಗಳಲ್ಲಿ‌ ಮಾನವೀಯತೆ ಸತ್ತು ಹೋದರೆ ಬಡ ಜನರ ಪಾಡೇನು ? : ದಿನೇಶ್ ಗುಂಡೂರಾವ್

ಸರ್ಕಾರಿ ಆಸ್ಪತ್ರೆಗಳಲ್ಲಿ‌ ಮಾನವೀಯತೆ ಸತ್ತು ಹೋದರೆ ಬಡ ಜನರ ಪಾಡೇನು ? : ದಿನೇಶ್ ಗುಂಡೂರಾವ್

ಬೆಂಗಳೂರು: ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಸಕಾಲದಲ್ಲಿ ಚಿಕಿತ್ಸೆ ಸಿಗದೆ ಗರ್ಭಿಣಿ ಮಹಿಳೆ ಸಹಿತ ಆಕೆಯ ಗರ್ಭದಲ್ಲಿದ್ದ  ಅವಳಿ ಮಕ್ಕಳು ಮೃತಪಟ್ಟ ಘಟನೆಗೆ ಸಂಬಂಧಿಸಿ  ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ತಾಯಿ ಕಾರ್ಡ್ ಮತ್ತು ಆಧಾರ್ ಕಾರ್ಡ್ ಇಲ್ಲದ ನೆಪವೊಡ್ಡಿ ಗರ್ಭಿಣಿ ಮಹಿಳೆಗೆ ತುಮಕೂರು ಜಿಲ್ಲಾ ಆಸ್ಪತ್ರೆ ಚಿಕಿತ್ಸೆ ನಿರಾಕರಿಸಿದೆ. ಇದರಿಂದಾಗಿ ತಾಯಿ ಮತ್ತು ಗರ್ಭದಲ್ಲಿದ್ದ ಅವಳಿ‌ ಮಕ್ಕಳು‌ ಮೃತಪಟ್ಟಿವೆ. ಇದೊಂದು ಅಮಾನವೀಯ ಘಟನೆ. ಸರ್ಕಾರಿ ಆಸ್ಪತ್ರೆಗಳಲ್ಲಿ‌ ಮಾನವೀಯತೆ ಸತ್ತು ಹೋದರೆ ಬಡ ಜನರ ಪಾಡೇನು ಎಂದು ಪ್ರಶ್ನಿಸಿದ್ದಾರೆ.

Join Whatsapp
Exit mobile version