Home ಕರಾವಳಿ PFI ನಾಯಕರ ಅಕ್ರಮ ಬಂಧನದ ವಿರುದ್ಧ ಕಾನೂನು ಹೋರಾಟ: ಅಬೂಬಕ್ಕರ್ ಕುಳಾಯಿ

PFI ನಾಯಕರ ಅಕ್ರಮ ಬಂಧನದ ವಿರುದ್ಧ ಕಾನೂನು ಹೋರಾಟ: ಅಬೂಬಕ್ಕರ್ ಕುಳಾಯಿ

ಮಂಗಳೂರು: PFI ನಾಯಕರ ಮೇಲೆ ಸುಳ್ಳಾರೋಪ ಹೊರಿಸಿ ಇಲ್ಲಿನ ತನಿಖಾ ಸಂಸ್ಥೆಗಳು ಮತ್ತು ಪೊಲೀಸರು ನಡೆಸುತ್ತಿರುವ ಅಕ್ರಮ ಬಂಧನದ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು SDPI ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿರುವ ಅವರು, ಕೇಂದ್ರ ತನಿಖಾ ಸಂಸ್ಥೆಯು (NIA) ಸೆಪ್ಟೆಂಬರ್ 22 ರಂದು ದೇಶಾದ್ಯಂತ PFI ಸಂಘಟನೆಯ ಕಚೇರಿಗಳನ್ನು ಗುರಿಯಾಗಿಸಿ ದಾಳಿ ನಡೆಸಿ, ಅದರ ನಾಯಕರನ್ನು ಬಂಧಿಸಿದೆ. ಅಲ್ಲದೆ ಇನ್ನೂ ಮುಂದುವರಿದು ಇಂದು ಮಂಗಳವಾರ ಮತ್ತೆ ಹಲವು PFI ಸಂಘಟನೆಯ ನಾಯಕರು ಮತ್ತು ಕಾರ್ಯಕರ್ತರನ್ನು ಅಕ್ರಮವಾಗಿ ಬಂಧಿಸಲಾಗಿದೆ. ಇದನ್ನು SDPI ದ.ಕ ಜಿಲ್ಲಾ ಸಮಿತಿ ಕಟುಶಬ್ದಗಳಿಂದ ಖಂಡಿಸುತ್ತದೆ ಎಂದು ತಿಳಿಸಿದರು.

ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಆಡಳಿತ ವೈಫಲ್ಯವನ್ನು ಮುಚ್ಚಿಹಾಕುವ ಸಲುವಾಗಿ ಆರೆಸ್ಸೆಸ್ ಮತ್ತು ಬಿಜೆಪಿ ಒಟ್ಟಾಗಿ PFI ಸಂಘಟನೆಯನ್ನು ದಮನಿಸುವ ಕಾರ್ಯವನ್ನು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಸರ್ಕಾರದ ಯಂತ್ರವನ್ನು ದುರುಪಯೋಗಪಡಿಸಿಕೊಂಡು PFI ಸಂಘಟನೆಯ ಹೋರಾಟಕ್ಕೆ ಅಡ್ಡಿಪಡಿಸಿ, ಬಂಧಿಸಿ ಜೈಲಿಗಟ್ಟಿದರೆ ಈ ಹೋರಾಟವನ್ನು ಹತ್ತಿಕ್ಕಬಹುದು ಎಂದು ಭಾವಿಸುವುದು ನಿಮ್ಮ ಹಗಲು ಕನಸು. PFI ಸಂಘಟನೆಯ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಇದರ ವಿರುದ್ಧ ಕಾನೂನು ಹೋರಾಟ ನಡೆಸಲಿದ್ದೇವೆ ಎಂದು ಎಚ್ಚರಿಸಿದರು.

Join Whatsapp
Exit mobile version