Home ಟಾಪ್ ಸುದ್ದಿಗಳು ಮಹಿಳಾ ದೌರ್ಜನ್ಯ, ದುಷ್ಟ ಸವಾಲುಗಳನ್ನು ಎದುರಿಸಲು ಕಾನೂನು ಹೋರಾಟ ಅನಿವಾರ್ಯ: ವಿಮೆನ್ ಇಂಡಿಯಾ ಮೂವ್ಮೆಂಟ್

ಮಹಿಳಾ ದೌರ್ಜನ್ಯ, ದುಷ್ಟ ಸವಾಲುಗಳನ್ನು ಎದುರಿಸಲು ಕಾನೂನು ಹೋರಾಟ ಅನಿವಾರ್ಯ: ವಿಮೆನ್ ಇಂಡಿಯಾ ಮೂವ್ಮೆಂಟ್

ನವದೆಹಲಿ: ವಿಮೆನ್ ಇಂಡಿಯಾ ಮೂವ್ಮೆಂಟ್ ಇದರ ರಾಷ್ಟ್ರೀಯ ಸಮಿತಿ ಸಭೆಯು ಸೆಪ್ಟೆಂಬರ್ 06 ರಂದು ದೆಹಲಿಯಲ್ಲಿ ರಾಷ್ಟ್ರೀಯ ಅಧ್ಯಕ್ಷೆ ಯಾಸ್ಮಿನ್ ಇಸ್ಲಾಂ ಅಧ್ಯಕ್ಷತೆಯಲ್ಲಿ ನಡೆಯಿತು, ಸಭೆಯಲ್ಲಿ ಮಹಿಳೆಯರು ನೇರ ಬಲಿಪಶುಗಳಾಗಿರುವ ದೇಶದ ಹಲವಾರು ಸಾಮಾಜಿಕ , ಆರ್ಥಿಕ ಸಮಸ್ಯೆಗಳ ಕುರಿತು ಚರ್ಚಿಸಲಾಯ್ತು

ಮಹಿಳಾ ಸಂಬಂದಿತ ಜ್ವಲಂತ ಸಮಸ್ಯೆಗಳಾದ ದೌರ್ಜನ್ಯ, ತಾರತಮ್ಯ, ಅನಿಯಂತ್ರಿತ ಸ್ತ್ರೀದ್ವೇಷ, ಮಹಿಳೆಯರ ಮೇಲಿನ ಸಾಮಾಜಿಕ ಅನ್ಯಾಯ,ಹಣದುಬ್ಬರ ಇತ್ಯಾದಿಗಳು ಸಭೆಯಲ್ಲಿ ಗಂಭೀರವಾದ ಕಳವಳವನ್ನು ಉಂಟುಮಾಡಿದವು. ಇಂತಹ ದುಷ್ಟ ಸವಾಲುಗಳನ್ನು ಎದುರಿಸಲು ಕಾನೂನು ಹೋರಾಟದ ಬಗ್ಗೆ ಅರಿವು-ಆತ್ಮವಿಶ್ವಾಸ ಬೆಳೆಸಲು ಮಹಿಳೆಯರಿಗೆ ಜಾಗೃತಿ ಮೂಡಿಸಲು ತೀರ್ಮಾನಿಸಲಾಯಿತು.

ವಿಮೆನ್ ಇಂಡಿಯಾ ಮೂವ್ಮೆಂಟ್ ಉಪಾಧ್ಯಕ್ಷೆ ರೈಹಾನತ್.ಕೆ.ಕೆ ಮತ್ತು ಮಮ್ದೂಹ ಮಾಜಿದ್, ಪ್ರಧಾನ ಕಾರ್ಯದರ್ಶಿ ಮಾಯಾ ಬಜದ್, ಕೋಶಾಧಿಕಾರಿ ಕುಮ್ ಕುಮ್ ಬೆನ್, ಕಾರ್ಯದರ್ಶಿ ವಕೀಲರಾದ ಖಾಲಿದಾ ಬೇಗಮ್ ಮತ್ತು ಇತರ ರಾಷ್ಟ್ರೀಯ ಸಮಿತಿ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು

Join Whatsapp
Exit mobile version