Home ಟಾಪ್ ಸುದ್ದಿಗಳು ಜ್ಞಾನವಾಪಿ ಪ್ರಕರಣದಲ್ಲಿ 1991ರ ಪೂಜಾ ಸ್ಥಳಗಳ ಕಾಯ್ದೆಯನ್ನು ಕೋರ್ಟುಗಳು ಪರಿಗಣಿಸಬೇಕು: ಎಸ್. ಡಿ.ಪಿ.ಐ

ಜ್ಞಾನವಾಪಿ ಪ್ರಕರಣದಲ್ಲಿ 1991ರ ಪೂಜಾ ಸ್ಥಳಗಳ ಕಾಯ್ದೆಯನ್ನು ಕೋರ್ಟುಗಳು ಪರಿಗಣಿಸಬೇಕು: ಎಸ್. ಡಿ.ಪಿ.ಐ

ನವದೆಹಲಿ: ಐದು ಜನ ಹಿಂದೂ ಮಹಿಳೆಯರು ಜ್ಞಾನವಾಪಿ ಮಸೀದಿಯ ಆವರಣದಲ್ಲಿ ಪೂಜೆಗೆ ಅವಕಾಶ ಮಾಡಿಕೊಡುವ ಮನವಿಯು ವಿಚಾರಣೆಗೆ ಅರ್ಹ ಎಂಬ ನ್ಯಾಯಾಲಯದ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಜ್ಞಾನವಾಪಿ ಪ್ರಕರಣದಲ್ಲಿ 1991ರ ಪೂಜಾ ಸ್ಥಳಗಳ ಕಾಯ್ದೆಯನ್ನು ಕೋರ್ಟುಗಳು ಪರಿಗಣಿಸಬೇಕು ಎಂದು ಹೇಳಿದೆ.

ಹಿಂದೂ ಮಹಿಳೆಯರು ಸಲ್ಲಿಸಿರುವ ಅರ್ಜಿ ಊರ್ಜಿತವೇ ಎಂದು ನೋಡಲು ಸುಪ್ರೀಂ ಕೋರ್ಟ್ ವಾರಣಾಸಿಯ ಜಿಲ್ಲಾ ನ್ಯಾಯಾಲಯಕ್ಕೆ ಹೇಳಿತ್ತು. ಅದರಂತೆ ಈಗ ವಾರಣಾಸಿಯ ಜಿಲ್ಲಾ ನ್ಯಾಯಾಲಯ ಈ ವಿಚಾರವಾಗಿ ಆದೇಶ ನೀಡಿದ್ದು, ಈ ಪ್ರಕರಣದಲ್ಲಿ ಕೋಮು ಸೌಹಾರ್ದ ಮತ್ತು ಭಾತೃತ್ವವನ್ನು ಕಾಪಾಡಲು ಅವಶ್ಯವಿರುವ 1991ರ ಪೂಜಾ ಸ್ಥಳಗಳ ಕಾಯ್ದೆಯನ್ನು ಪರಿಗಣನೆಗೆ ತೆಗೆದುಕೊಳ್ಳದೇ ಇರುವುದು ದೇಶದಲ್ಲಿ ಈಗಾಗಲೇ ಇರುವ ವಿಷಮ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿ ಇಂತಹ ಸಾಕಷ್ಟು ಸವಾಲುಗಳನ್ನು ಒಡ್ಡಲಿದೆ ಎಂದು ಎಸ್. ಡಿ.ಪಿ.ಐ ರಾಷ್ಟ್ರೀಯ ಉಪಾಧ್ಯಕ್ಷರಾದ ಅಡ್ವೋಕೇಟ್ ಶರ್ಫುದ್ದೀನ್ ಅಹಮದ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಬಗ್ಗೆ ವಿವರಿಸಿದ ಅಡ್ವಕೇಟ್ ಅಹಮದ್, ಕೋರ್ಟುಗಳು ಮೊದಲು ಪ್ರಕರಣದ ವ್ಯಾಪ್ತಿ ಮತ್ತು ಊರ್ಜಿತತೆಯನ್ನು ನಿರ್ಧರಿಸಬೇಕು. ಏಕೆಂದರೆ ಕಾಯ್ದೆ ಈ ರೀತಿಯ ಸಿವಿಲ್ ದಾವೆ ಹೂಡುವುದನ್ನು ನಿಷೇಧಿಸಿದೆ. ಜೊತೆಗೆ ಈ ರೀತಿಯ ಅರ್ಜಿ ಸಲ್ಲಿಸುವುದನ್ನು ಕ್ರಿಮಿನಲ್ ಆಪರಾಧವೆಂದು ಪರಿಗಣಿಸಲೂ ಕೂಡ ಈ ಕಾಯ್ದೆಯಲ್ಲಿ ಅವಕಾಶವಿದೆ. ಕೋರ್ಟ್ ಮುಂದೆ ಇದ್ದ ಪ್ರಶ್ನೆ ಈ ಪ್ರಕರಣ ಊರ್ಜಿತವೇ ಎಂಬುದು. ಆದರೆ ಕೋರ್ಟ್ 1991ರ ಪೂಜಾ ಸ್ಥಳಗಳ ಕಾಯ್ದೆಯನ್ನು ನಿರ್ಲಕ್ಷಿಸಿದೆ ಎಂದ ಅವರು, ಈ ಆದೇಶದ ವಿರುದ್ಧ ಹೈಕೋರ್ಟ್ ಮೊರೆ ಹೋಗುವ ಅವಕಾಶ ಇದೆ ಎಂದು ಹೇಳಿದರು.

ಈ ಆದೇಶದಿಂದ ನೊಂದ ಕಕ್ಷಿದಾರರು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿ, ಈ ಪ್ರಕರಣ ಊರ್ಜಿತವೆ ಎಂದು ಮರು ಪರಿಶೀಲನೆ ಮಾಡುವಂತೆ ಕೇಳಿಕೊಳ್ಳಬೇಕು ಎಂದು ಅವರು ಹೇಳಿದರು. ಇದೇ ಸಂದರ್ಭದಲ್ಲಿ ಎಸ್ಡಿಪಿಐ ನಾಯಕ ಮಾಧ್ಯಮಗಳನ್ನು ಟೀಕೆ ಮಾಡಿತ್ತಾ, ಮಾಧ್ಯಮಗಳು ಈ ಆದೇಶವನ್ನು ಅಂತಿಮ ತೀರ್ಪು ಅನ್ನುವ ರೀತಿಯಲ್ಲಿ ಪ್ರಚೋದನಕಾರಿಯಾಗಿ ಪ್ರಸಾರ ಮಾಡುತ್ತಿವೆ. ಇದು ಕೇವಲ ಅರ್ಜಿ ಊರ್ಜಿತವೇ ಎನ್ನುವುದರ ಬಗ್ಗೆ ಬಂದಿರುವ ಆದೇಶವಾಗಿದ್ದರು ಕೂಡ, ಅದು ಮುಸ್ಲಿಂ ವಿರುದ್ಧದ ತೀರ್ಪು ಎನ್ನುವಂತೆ ಬಿಂಬಿಸುತ್ತಿದ್ದಾರೆ ಎಂದು ಹೇಳಿದರು.

ಅಂತಿಮ ನಿರ್ಧಾರ ಹೊರಬರಲು ಬಹಳಷ್ಟು ಸಮಯ ಇದೆ. ವಿಚಾರಣೆ ಆರಂಭವಾದ ಮೇಲೆ ಸಾಕ್ಷಿ, ವಾದ, ಪ್ರತಿವಾದದ ಆಧಾರದ ಮೇಲೆ ಪ್ರಕರಣ ನಡೆಯಲಿದೆ, ಜಿಲ್ಲಾ ನ್ಯಾಯಾಲಯ ಕೊಟ್ಟಿರುವ ಆದೇಶ ಕೇವಲ ಪ್ರಕರಣವನ್ನು ಮುಂದುವರಿಸಲು ಕೊಟ್ಟಿರುವ ಅನುಮತಿ ಅಷ್ಟೇ ಎಂದರೆ. ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂದು ಹೇಳಿದ ಅವರು, ಈ ಪ್ರಕರಣದ ವಿಚಾರಣೆ ಆರಂಭವಾಗುವುದೇ ಮೇಲಿನ ಕೋರ್ಟ್ಗಳು ಸಹ ಈ ಆದೇಶವನ್ನು ಎತ್ತಿ ಹಿಡಿದರೆ ಮಾತ್ರ. ಅಂತಹ ಸಂದರ್ಭದಲ್ಲಿ ಕೂಡ ಕಕ್ಷಿದಾರರಿಗೆ ತಮ್ಮ ವಾದ ಮಂಡಿಸುವ ಮತ್ತು ಸಾಕ್ಷಿಗಳನ್ನು ಪ್ರಸ್ತುತಪಡಿಸುವ ಎಲ್ಲ ಹಕ್ಕುಗಳು ಇರುತ್ತವೆ. ಹಾಗಾಗಿ ಶಾಂತಿ ಮತ್ತು ಸಂಯಮದಿಂದ ಇರುವುದು ಬಹಳ ಮುಖ್ಯ ಎಂದು ಅವರು ತಿಳಿಸಿದರು.

Join Whatsapp
Exit mobile version