Home Uncategorized ಕುಶಾಲನಗರ | “ಕಾನೂನು ಅರಿವು ಭ್ರಷ್ಟಾಚಾರ ನಿರ್ಮೂಲನೆ” ಬಗ್ಗೆ ಜಾಗೃತಿ ಅರಿವು ಕಾರ್ಯಕ್ರಮ

ಕುಶಾಲನಗರ | “ಕಾನೂನು ಅರಿವು ಭ್ರಷ್ಟಾಚಾರ ನಿರ್ಮೂಲನೆ” ಬಗ್ಗೆ ಜಾಗೃತಿ ಅರಿವು ಕಾರ್ಯಕ್ರಮ

ಕುಶಾಲನಗರ: “ಕನ್ನಡಕ್ಕಾಗಿ ನಾವು” ಅಭಿಯಾನದ ಭಾಗವಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕುಶಾಲನಗರ ವಿದ್ಯಾರ್ಥಿಗಳಿಗೆ ಕಾನೂನು ಸೇವಾ ಸಮಿತಿ ಕುಶಾಲನಗರ ಇದರ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ “ಕಾನೂನು ಅರಿವು” ಭ್ರಷ್ಟಾಚಾರ ನಿರ್ಮೂಲನೆ ಬಗ್ಗೆ “ಜಾಗೃತಿ ಅರಿವು ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದ ಕುಶಾಲನಗರ ವಕೀಲರ ಸಂಘದ ಕಾರ್ಯದರ್ಶಿ ಕೆ.ಬಿ.ಮೋಹನ್ ಮಹಿಳೆಯರ ಹಕ್ಕುಗಳ ಸಂರಕ್ಷಣೆ ಇಂದು ಅತ್ಯಂತ ಜಾಗೃತವಾಗಿದೆ. ಮಹಿಳೆಯರು ಸ್ವಾಭಿಮಾನದಿಂದ ಬದುಕಲು ಮಹಿಳೆಯರ ಕಾನೂನುಗಳು ಇಲ್ಲಿ ಅವಕಾಶ ಕಲ್ಪಿಸಿವೆ, ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ ಮುಂತಾದ ದಬ್ಬಾಳಿಕೆಗಳಿಗೆ ರಕ್ಷಣೆ ನೀಡುವ ಕಾನೂನುಗಳು ಇಂದು ಲಭ್ಯವಿರುವದರಿಂದ ಸದುಪಯೋಗಪಡಿಸುಕೊಳ್ಳುವಂತೆ ಕೋರಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಎಚ್.ಬಿ.ಲಿಂಗಮೂರ್ತಿ ಪ್ರತಿಯೊಬ್ಬ ನಾಗರಿಕನಿಗೆ ಇಲ್ಲಿನ ಕಾನೂನುಗಳ ಬಗ್ಗೆ ಅರಿವಿದ್ದರಷ್ಟೇ ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕ ಚರಿತ, ಸುಧಾಕರ, ಸುನೀಲ್ ಕುಮಾರ್, ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ವಸಂತಕುಮಾರಿ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ವಸಂತಕುಮಾರಿ ಉಪಸ್ಥಿತರಿದ್ದರು.

ಮಾನವ ಹಕ್ಕುಗಳು, ವಿದ್ಯಾರ್ಥಿ ಸಮಿತಿ, ಸಾಂಸ್ಕೃತಿಕ ಸಮಿತಿ, ಎನ್ಎಜಸ್ಎಿಸ್, ರೆಡ್ ಕ್ರಾಸ್ ಮತ್ತು ಮಹಿಳಾ ದೌರ್ಜನ್ಯ ತಡೆ ಸಮಿತಿ ವತಿಯಿಂದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

Join Whatsapp
Exit mobile version