ರೋಮ್: ಪರ್ವತದ ಮಣ್ಣು ಕುಸಿದ ಪರಿಣಾಮ ಮೂರು ವಾರದ ನವಜಾತ ಶಿಶು ಸೇರಿ 7 ಮಂದಿ ಮೃತಪಟ್ಟ ಘಟನೆ ಇಟಲಿಯ ಇಸ್ಕಿಯಾ ದ್ವೀಪದ ನೇಪಲ್ಸ್ ನ ಕಸಾಮಿಚ್ ನಗರದಲ್ಲಿ ನಡೆದದೆ.
ಭಾರೀ ಮಳೆಯಿಂದಾಗಿ ಪರ್ವತದ ಒಂದು ಭಾಗವು ಸಡಿಲಗೊಂಡು ಕುಸಿದ ರಭಸಕ್ಕೆ ಕಟ್ಟಡಗಳು ಉರುಳಿ, ವಾಹನಗಳು ಸಮುದ್ರಕ್ಕೆಸೆಯಲ್ಪಟ್ಟಿವೆ.
ಅಪಘಾತದ ಸ್ಥಳದಲ್ಲಿ ಸಂಪೂರ್ಣ ಕೆಸರು ಮತ್ತು ನೀರು ತುಂಬಿದ್ದು, ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಎಲ್ಲ ಮೃತದೇಹಗಳನ್ನು ಅವಶೇಷಗಳಡಿಯಿಂದ ಹೊರತೆಗೆಯಲಾಗಿದ್ದು, ನಾಪತ್ತೆಯಾಗಿರುವ 5 ಮಂದಿಗಾಗಿ ಶೋಧ ನಡೆಯುತ್ತಿದೆ. ಮತ್ತೆ ಭೂಕುಸಿತದ ಅಪಾಯಗಳಿದ್ದು, ರಕ್ಷಣಾ ತಂಡ ಕಾಲ್ನಡಿಗೆಯಲ್ಲಿ ಶೋಧ ಕಾರ್ಯ ಮುಂದುವರಿಸಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿ ಲೂಕಾ ಕ್ಯಾರಿ ತಿಳಿಸಿದ್ದಾರೆ.
ರಸ್ತೆ ತೆರವು ಮಾಡಿ ರಕ್ಷಣಾ ತಂಡ ಘಟನಾ ಸ್ಥಳಕ್ಕೆ ತೆರಳಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಸಣ್ಣ ಬುಲ್ಡೋಜರ್ ಗಳನ್ನು ಬಳಸಲಾಗುತ್ತಿದೆ. ಸಮುದ್ರಕ್ಕೆ ದೂಡಲ್ಪಟ್ಟಿರುವ ಕಾರುಗಳ ಶೋಧಕ್ಕೆ ಮುಳುಗು ತಜ್ಞರನ್ನು ಕರೆಸಲಾಗಿದೆ ಎಂದು ಕ್ಯಾರಿ ತಿಳಿಸಿದ್ದಾರೆ.