Home ಟಾಪ್ ಸುದ್ದಿಗಳು ಲೇಖಕಿ ಡಾ. ಝೀಟಾ ಲೋಬೋ ರವರಿಗೆ “ಕಲ್ಲಚ್ಚು ಪ್ರಶಸ್ತಿ”  ಪ್ರದಾನ

ಲೇಖಕಿ ಡಾ. ಝೀಟಾ ಲೋಬೋ ರವರಿಗೆ “ಕಲ್ಲಚ್ಚು ಪ್ರಶಸ್ತಿ”  ಪ್ರದಾನ

ಕಲ್ಲಚ್ಚು ಪ್ರಕಾಶನದ 13 ನೇ ಆವೃತ್ತಿಯ 2022ರ ಕಲ್ಲಚ್ಚು ಪ್ರಶಸ್ತಿಯನ್ನು ಲೇಖಕಿ ಕಲಾವಿದೆ ಹಾಗೂ ಶಿಕ್ಷಣ ತಜ್ಞೆ ಆಗಿರುವ ಪ್ರೊ. ಡಾ. ಝೀಟಾ ಲೋಬೊರವರಿಗೆ ಪ್ರಧಾನ ಮಾಡಲಾಯಿತು.

“ವ್ಯಕ್ತಿಯೊಬ್ಬರು ತಾನು ತೊಡಗಿಸಿಕೊಂಡಿರುವ ಎಲ್ಲ ಕ್ಷೇತ್ರಗಳಲ್ಲೂ ಅಪ್ರತಿಮ ಸಾಧನೆ ಮಾಡುವುದು ಕೇವಲ ಬಹುಮುಖ ವ್ಯಕ್ತಿತ್ವ ಮಾತ್ರವಲ್ಲ, ಅದೊಂದು ಯಶಸ್ಸಿನ ಛಲ ” ಎಂದು ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರಾದ ಕೆ ರಮೇಶ್ ನಾಯಕ್ ರಾಯಿ ಹೇಳಿದ್ದಾರೆ. ಅವರು ಕಲ್ಲಚ್ಚು ಪ್ರಕಾಶನದ 13 ನೇ ಆವೃತ್ತಿಯ 2022ರ ಕಲ್ಲಚ್ಚು ಪ್ರಶಸ್ತಿಯನ್ನು ಲೇಖಕಿ ಕಲಾವಿದೆ ಹಾಗೂ ಶಿಕ್ಷಣ ತಜ್ಞೆ ಆಗಿರುವ ಪ್ರೊ. ಡಾ. ಝೀಟಾ ಲೋಬೊರವರಿಗೆ ಪ್ರಧಾನ ಮಾಡಿ ಮಾತನಾಡಿದರು.

ಅಭಿನಂದನೆಗಳ ನುಡಿಗಳನ್ನು ಹೇಳಿದ  ಎಂ. ವಿ. ಶೆಟ್ಟಿ ಸಂಸ್ಥೆಯ ಡಾ.ಹಿಮ ಉರ್ಮಿಳಾ ಶೆಟ್ಟಿ ಯವರು ಸಾಹಿತಿ ಯೂ. ಆರ್ ಅನಂತಮೂರ್ತಿಯವರ ಪ್ರಭಾವ ಅನೇಕ ಸಾಧಕರಲ್ಲಿ ಕಾಣಲು ಸಾಧ್ಯ, ಈ ನೆಲೆಯ ಸಾಮಾಜಿಕ ಮತ್ತು ಪರಿಸರ ಕಾಳಜಿ ಇರುವ ಝೀಟಾರವರಿಗೆ ಶುಭ ಹಾರೈಸಿದರು. ಹಿಂದು ಪತ್ರಿಕೆಯ ಅನಿಲ್ ಕುಮಾರ್ ಶಾಸ್ತ್ರಿ ಮತ್ತು ಯುವ ಕಥೆರ್ಗಾತಿ ಫಾತಿಮಾ ರಾಲಿಯಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಈ ಸಮಾರಂಭದಲ್ಲಿ ಪ್ರಕಾಶನದ ಮುಖ್ಯಸ್ಥ ಸಾಹಿತಿ ಮಹೇಶ ಆರ್ ನಾಯಕ್ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಯುವ ಕಲಾವಿದೆ ನಂದಿನಿ ಶಾರ್ವಿ ನಾೃಕ್ ಅವರನ್ನು ಸನ್ಮಾನಿಸಲಾಯಿತು. ಕವಿ ಯೋಗೀಶ್ ಮಲ್ಲಿಗೆಮಾಡು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಕನ್ನಡ ಮತ್ತು ಕೊಂಕಣಿ ಭಾಷೆಯ ಅನೇಕ ಸಾಹಿತಿ ಕಲಾವಿದರು ಉಪಸ್ಥಿತರಿದ್ದರು.

Join Whatsapp
Exit mobile version