Home ಟಾಪ್ ಸುದ್ದಿಗಳು ಪ್ರತಾಪ್ ಸಿಂಹ ಅಸಲಿಯತ್ತು ಬಯಲು ಮಾಡಲು ಬಂದ ಲಕ್ಷ್ಮಣ್ ಬಂಧನ

ಪ್ರತಾಪ್ ಸಿಂಹ ಅಸಲಿಯತ್ತು ಬಯಲು ಮಾಡಲು ಬಂದ ಲಕ್ಷ್ಮಣ್ ಬಂಧನ

ಮೈಸೂರು: ಮೈಸೂರು ಅಭಿವೃದ್ಧಿ ಚರ್ಚೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಮುಂದಾಗಿದ್ದು ದಾಖಲೆ ಸಹಿತ ಸಂಸದರಲ್ಲಿ ಪ್ರಶ್ನೆ ಕೇಳಲು ಬಂದಿದ್ದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಬಿಜೆಪಿ ಏನು ಅಭಿವೃದ್ಧಿ ಮಾಡಿದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯರವರ ಪ್ರಶ್ನೆಯ ಹಿನ್ನೆಲೆಯಲ್ಲಿ ಸಂಸದ ಪ್ರತಾಪ್ ಸಿಂಹ ಅವರು ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಎಚ್.ಸಿ ಮಹದೇವಪ್ಪಗೆ ಚರ್ಚೆಗೆ ಆಹ್ವಾನ ಮಾಡಿದ್ದರು . ಮತ್ತು ಸಿದ್ದರಾಮಯ್ಯ, ಮಹಾದೇವಪ್ಪ ಪರವಾಗಿ ಚರ್ಚೆಗೆಂದು ಬಂದಿದ್ದ ಲಕ್ಷ್ಮಣ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮಣ್ , ನಮ್ಮನ್ನು ಯಾಕೆ  ಬಂಧಿಸುತ್ತಿದ್ದೀರಿ. ನಾವು ಜನಪ್ರತಿನಿಧಿಯಾಗಿರುವ ಸಂಸದರೊಂದಿಗೆ ಚರ್ಚೆಗೆ ಬಂದದ್ದು, ಯುದ್ಧಕಲ್ಲ ಎಂದಿದ್ದಾರೆ.

ಸಿದ್ಧರಾಮಯ್ಯ ಆಡಳಿತಾವಧಿಯಲ್ಲಿ ಸರಿಸುಮಾರು 3,800  ಕೋಟಿಯನ್ನು ಮೈಸೂರಿಗೆ ಕೊಟ್ಟಿದ್ದಾರೆ. ಆದರೆ ನೀವು ಐದು ರೂಪಾಯಿ ಕೊಡದೆ ರಾಜ್ಯದ ಜನರನ್ನು ದಿಕ್ಕುತಪ್ಪಿಸುವ ಕೆಲಸವನ್ನು ಮಾಡುತ್ತಿದ್ದೀರಿ. ಯಾಕೆ ಈ ರೀತಿ ಕದ್ದು ಬಚ್ಚಿಟ್ಟು ನಮ್ಮನ್ನು ಅರೆಸ್ಟ್ ಮಾಡುತ್ತಿದ್ದೀರಿ ಎಂದು ಕಿಡಿಕಾರಿದರು.

ಜನಪರವಾಗಿರಬೇಕಾದ ಸರಕಾರ ಪ್ರಶ್ನಿಸುವವರನ್ನೇ ಇಡಿ ಬಳಸಿ ಹತ್ತಿಕ್ಕುವ ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ ಎಂದು ಲಕ್ಷ್ಮಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp
Exit mobile version