Home ಟಾಪ್ ಸುದ್ದಿಗಳು “ಖಾಸಗೀಕರಣವನ್ನು ಒಪ್ಪಿಕೊಳ್ಳಿ, ಇಲ್ಲದಿದ್ದರೆ ‘ಬ್ಯಾಂಕ್ ಜಿಹಾದಿ’ ಎಂದು ಕರೆಯಬಹುದು” : ಕುನಾಲ್ ಕಮ್ರಾ

“ಖಾಸಗೀಕರಣವನ್ನು ಒಪ್ಪಿಕೊಳ್ಳಿ, ಇಲ್ಲದಿದ್ದರೆ ‘ಬ್ಯಾಂಕ್ ಜಿಹಾದಿ’ ಎಂದು ಕರೆಯಬಹುದು” : ಕುನಾಲ್ ಕಮ್ರಾ

ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವ ಕ್ರಮದ ವಿರುದ್ಧ ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಮತ್ತು ಕೇಂದ್ರವನ್ನು ಬೆಂಬಲಿಸುವ ಮಾಧ್ಯಮಗಳ ಬಗ್ಗೆ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಕುನಾಲ್ ಕಮ್ರಾ ಹೇಳಿದ್ದು ಹೀಗೆ; “ಬ್ಯಾಂಕುಗಳು ದಯವಿಟ್ಟು ಮೋದಿಜಿಯ ಖಾಸಗೀಕರಣವನ್ನು ಒಪ್ಪಿಕೊಳ್ಳಿ. ಇಲ್ಲದಿದ್ದರೆ, ಗೋದಿ ಮೀಡಿಯಾ ಶೀಘ್ರದಲ್ಲೇ ಬ್ಯಾಂಕ್ ಮುಷ್ಕರವನ್ನು ‘ಬ್ಯಾಂಕ್ ಜಿಹಾದ್’ ಎಂದು ಕರೆಯಲಿದೆ”.

ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವ ಕ್ರಮವನ್ನು ವಿರೋಧಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಎರಡು ದಿವಸಗಳ ಮುಷ್ಕರ ನಡೆಸಿದೆ. ಮುಷ್ಕರದ ಹಿನ್ನೆಲೆಯಲ್ಲಿ ಸಾರ್ವಜನಿಕ, ಖಾಸಗಿ ಮತ್ತು ವಿದೇಶಿ ಗ್ರಾಮೀಣ ಬ್ಯಾಂಕುಗಳ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಮಾರ್ಚ್ 17 ರಂದು ಸಾಮಾನ್ಯ ವಿಮಾ ನೌಕರರು ಮತ್ತು ಎಲ್ಐಸಿ ನೌಕರರು ಮಾರ್ಚ್ 18 ರಂದು ಮುಷ್ಕರ ನಡೆಸುವುದಾಗಿ ಘೋಷಿಸಿದ್ದಾರೆ. ಶನಿವಾರ ಮತ್ತು ಭಾನುವಾರ ರಜಾದಿನಗಳಾಗಿರುವುದರಿಂದ ಬ್ಯಾಂಕುಗಳನ್ನು ನಾಲ್ಕು ದಿನಗಳವರೆಗೆ ಮುಚ್ಚಲಾಗಿದೆ.

Join Whatsapp
Exit mobile version