Home ಜಾಲತಾಣದಿಂದ ಕುಂಬಾರ ಜನಾಂಗಕ್ಕೆ ಪ್ರತ್ಯೇಕ ನಿಗಮ ರಚನೆ ಸೇರಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕುಂಬಾರರಿಂದ ಪ್ರತಿಭಟನೆ

ಕುಂಬಾರ ಜನಾಂಗಕ್ಕೆ ಪ್ರತ್ಯೇಕ ನಿಗಮ ರಚನೆ ಸೇರಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕುಂಬಾರರಿಂದ ಪ್ರತಿಭಟನೆ

ಬೆಂಗಳೂರು: ಕುಂಬಾರ ಜನಾಂಗಕ್ಕೆ ಪ್ರತ್ಯೇಕ ನಿಗಮ ಮಂಡಳಿಯನ್ನು ಸ್ಥಾಪಿಸಬೇಕೆಂದು ಆಗ್ರಹಿಸಿ ಸಮಸ್ತ ರಾಜ್ಯ ಮಟ್ಟದ ಕುಂಬಾರ ಸಂಘ ಸಂಸ್ಥೆಗಳು ಹಾಗೂ ಕರ್ನಾಟಕ ಕುಂಬಾರರ ಯುವ ಸೈನ್ಯ ವತಿಯಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಯಿತು.

ಯುವಸೈನ್ಯ ರಾಜ್ಯಾಧ್ಯಕ್ಷರಾದ ಶಂಕರ ಶೆಟ್ಟಿ ಕುಂಬಾರ, ಬಸವ ಮೂರ್ತಿ ಗುಂಡಯ್ಯ ಸ್ವಾಮೀಜಿ, ಬೆಳಗಾವಿಯ ಬಸವ ಗುಂಡಯ್ಯ, ಮೈಸೂರಿನ ಕುಲಾಲಗುಂಡ ಬ್ರಹ್ಮಯ್ಯ  ಕುಂಬಾರ ಸಂಘದ ಅಧ್ಯಕ್ಷ ಪ್ರಕಾಶ್, ವಿಜಯ ರಾಘವೇಂದ್ರ,  ಸಾಹಿತಿಗಳಾದ ಬನ್ನಪ್ಪ ಕುಂಬಾರ, ಪ್ರವೀಣ್ ಕುಮಾರ್, ಬಸವರಾಜ ನಿಡಗುಂದಿ,  ದಶರಥ ಕುಂಬಾರ ಮತ್ತಿತರರು ಹಾಜರಿದ್ದರು.

ಬಳಿಕ ಮಾತನಾಡಿದ ರಾಜ್ಯಾಧ್ಯಕ್ಷ ಶಂಕರ ಶೆಟ್ಟಿ ಕುಂಬಾರ, ರಾಜ್ಯದಲ್ಲಿರುವ 20ರಿಂದ 25 ಲಕ್ಷ ಜನಸಂಖ್ಯೆ ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ ಸಮುದಾಯವಾಗಿದೆ. ನಶಿಸುತ್ತಿರುವ ಕುಂಬಾರಿಕೆ ಕಲೆಯನ್ನು ಉಳಿಸಲು ಆರ್ಥಿಕ ವಿಶೇಷ ಮೀಸಲಾತಿಗಾಗಿ ಸೂಕ್ತ ಕ್ರಮ ಕೈಗೊಳ್ಳ ಬೇಕು, ಕುಂಬಾರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದು ಆಗ್ರಹಿಸಿದರು.

ಶಿವಶರಣ ಶ್ರೀ ಕುಂಬಾರ ಗುಂಡಯ್ಯ ಮತ್ತು ತ್ರಿಪದಿ ಕವಿ ಸರ್ವಜ್ಞರ ಜನ್ಮ ಸ್ಥಳ ಅಭಿವೃದ್ಧಿ ಪಡಿಸಬೇಕೆಂದು ಒತ್ತಾಯಿಸಿದರು.

Join Whatsapp
Exit mobile version