Home ಟಾಪ್ ಸುದ್ದಿಗಳು ಕುಮಾರಸ್ವಾಮಿ ರೀಲ್ ಬಿಡ್ತಾವ್ನೆ: ಡಿ.ಕೆ ಸುರೇಶ್ ಕಿಡಿ

ಕುಮಾರಸ್ವಾಮಿ ರೀಲ್ ಬಿಡ್ತಾವ್ನೆ: ಡಿ.ಕೆ ಸುರೇಶ್ ಕಿಡಿ

ರಾಮನಗರ: ಕುಮಾರಸ್ವಾಮಿ ರೀಲ್ ಬಿಡ್ತಾವ್ನೆ. ನಾನು ಕಲ್ಲು ಹೊಡಿತಿದ್ನೋ, ಅವನು ಕಸ ಹೊಡಿತಿದ್ನೋ ಮುಂದೆ ಮಾತನಾಡುತ್ತೇನೆ. ಅವನು ಡಬ್ಬಾ ಮಾಡಿಕೊಂಡು ನಮ್ಮತ್ರ ಬರುವವನು, ನಾವು ರೀಲ್ ಬಿಟ್ಟು ಬಂದಿರುವವರು. ಈ‌ ಕುಮಾರಸ್ವಾಮಿ ಬಿಜೆಪಿ ಜೊತೆ ಸೇರಿಕೊಂಡು ವಕಾಲತ್ತು ಹಾಕುತ್ತಾನೆ ಎಂದು ಸಂಸದ ಡಿ.ಕೆ.ಸುರೇಶ್ ಮಾಜಿ ಸಿಎಂ ಹೆಚ್ಡಿಕೆ ವಿರುದ್ಧ ಕಿಡಿಗಾರಿದ್ದಾರೆ.

ಗೃಹಲಕ್ಷ್ಮೀ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶಕ್ಕೆ ಮೋದಿ ಗ್ಯಾರಂಟಿ ಎನ್ನುತ್ತಾರೆ. ಆದರೆ ಬೆಂಗಳೂರು ಗ್ರಾಮಾಂತರಕ್ಕೆ ಡಿ.ಕೆ.ಸುರೇಶ್ ಗ್ಯಾರಂಟಿ. ನಾವು ನಮ್ಮ ಅನುದಾನ ಕೇಳಿದರೆ ಜನಸಂಖ್ಯೆ ಕಡಿಮೆ ಎನ್ನುತ್ತಾರೆ. ನಾವು ಮಕ್ಕಳು ಕಡಿಮೆ‌ ಮಾಡಿಕೊಂಡಿದ್ದೆ ತಪ್ಪಾ? ನಾವು ಜನಸಂಖ್ಯೆ ನಿಯಂತ್ರಣ ಮಾಡಿದ್ದೆ ತಪ್ಪಾ? ಎಂದು ಸುರೇಶ್ ಅಸಮಾಧಾನ‌ ವ್ಯಕ್ತಪಡಿಸಿದರು

ಉತ್ತರ ಪ್ರದೇಶದಲ್ಲಿ ಹೆಚ್ಚು ಮಕ್ಕಳು ಮಾಡಿದ್ದಾರೆಂದು ನಮ್ಮ ದುಡ್ಡನ್ನು ಅಲ್ಲಿಗೆ ಕೊಡುತ್ತೀರಾ? ಇದರ ವಿರುದ್ಧ ರಾಜ್ಯದ ಜನ ಧ್ವನಿ ಎತ್ತಬೇಕು. ನಮ್ಮ ಜನ ಉತ್ತರ ಪ್ರದೇಶಕ್ಕೆ, ಗುಜರಾತ್, ರಾಜಸ್ಥಾನಕ್ಕೆ ಹೋದರೆ ಕೆಲಸ ಕೊಡುತ್ತಾರಾ, ಕನ್ನಡಿಗರಿಗೆ ಕರ್ನಾಟಕ ಒಂದೇ. ಹಾಗಾಗಿ ನಮ್ಮ ನಾಡನ್ನು ನಾವು ಉಳಿಸಿಕೊಳ್ಳಬೇಕು ಎಂದು ಸಂಸದರು ಹೇಳಿದರು.

Join Whatsapp
Exit mobile version