Home ಟಾಪ್ ಸುದ್ದಿಗಳು ಜೆಡಿಎಸ್ ನಲ್ಲಿ ಕುಮಾರಸ್ವಾಮಿಯೇ ಅಧ್ಯಕ್ಷರು, ಅದರಲ್ಲೇನೂ ವಿಶೇಷವಿಲ್ಲ: ಚಲುವರಾಯಸ್ವಾಮಿ

ಜೆಡಿಎಸ್ ನಲ್ಲಿ ಕುಮಾರಸ್ವಾಮಿಯೇ ಅಧ್ಯಕ್ಷರು, ಅದರಲ್ಲೇನೂ ವಿಶೇಷವಿಲ್ಲ: ಚಲುವರಾಯಸ್ವಾಮಿ

ಬೆಂಗಳೂರು: ಜೆಡಿಎಸ್ ಪಕ್ಷದಲ್ಲಿ ಬೇರೆಯವರು ಅಧ್ಯಕ್ಷರಾಗಿದ್ದರೂ ಕುಮಾರಸ್ವಾಮಿಯೇ ಅಧ್ಯಕ್ಷರಾಗಿರುತ್ತಾರೆ. ಅದರಲ್ಲೇನೂ ವಿಶೇಷವಿಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.


ವಿಧಾನಸೌಧದಲ್ಲಿ ಗುರುವಾರ ಸಿ.ಎಂ.ಇಬ್ರಾಹಿಂ ಉಚ್ಛಾಟನೆ ವಿಚಾರವಾಗಿ ಪ್ರತಿಕ್ರಿಯಿಸಿ, ಇದೆಲ್ಲ ನಾವು ನೋಡದಿರುವ ವಿಚಾರವಲ್ಲ. ಏನೂ ವಿಶೇಷವೂ ಇಲ್ಲ. ಅನುಭವ ಇದ್ದುಕೊಂಡು ಇಬ್ರಾಹಿಂ ಅಲ್ಲಿಗೆ ಹೋಗಿದ್ದರು. ಅವರು ಇಲ್ಲೇ ಇದ್ದಿದ್ರೆ ಗೌರವ ಇರುತ್ತಿತ್ತು ಎಂದರು.

Join Whatsapp
Exit mobile version