Home ಟಾಪ್ ಸುದ್ದಿಗಳು ತೊಕ್ಕೊಟ್ಟು-ಮುಡಿಪು ರಸ್ತೆ ಅಭಿವೃದ್ಧಿಗೆ 30 ಕೋಟಿ ರೂ. ಅನುದಾನ ಬಿಡುಗಡೆ: ಯು.ಟಿ ಖಾದರ್

ತೊಕ್ಕೊಟ್ಟು-ಮುಡಿಪು ರಸ್ತೆ ಅಭಿವೃದ್ಧಿಗೆ 30 ಕೋಟಿ ರೂ. ಅನುದಾನ ಬಿಡುಗಡೆ: ಯು.ಟಿ ಖಾದರ್

ಉಳ್ಳಾಲ: ತೊಕ್ಕೊಟ್ಟು-ಮುಡಿಪು ರಸ್ತೆ ಅಭಿವೃದ್ಧಿಗೆ 30 ಕೋಟಿ ರೂಪಾಯಿ, ಮಂಗಳೂರು ವಿಧಾನಸಭಾ ಕ್ಷೇತ್ರದ ವಿವಿಧ ರಸ್ತೆಗಳ ಅಭಿವೃದ್ಧಿಗೆ ಸರಕಾರದಿಂದ ಅರುವತ್ತು ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿದೆಯೆಂದು ವಿದಾನಸಭೆಯ ಸಭಾಧ್ಯಕ್ಷ ಯು.ಟಿ ಖಾದರ್ ಹೇಳಿಕೆ ನೀಡಿದ್ದಾರೆ.

ಅವರು ಉಳ್ಳಾಲ ನಗರಸಭಾ ವ್ಯಾಪ್ತಿಯ ಕೆರೆಬೈಲ್ ಪ್ರದೇಶದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಕಾಂಕ್ರಿಟ್ ರಸ್ತೆ ಮತ್ತು ತಡೆಗೋಡೆ ಕಾಮಗಾರಿಗೆ ಗುರುವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಕೆರೆಬೈಲ್ ಪ್ರದೇಶಕ್ಕೆ ರಸ್ತೆ ಸಂಪರ್ಕವೇ ಇರಲಿಲ್ಲ. ರಸ್ತೆ ನಿರ್ಮಾಣಕ್ಕೆ ಸುಮಾರು ಮೂವತ್ತು ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು ಶೀಘ್ರವೆ ಕೆಲಸ ಪ್ರಾರಂಭಿಸಲಾಗುತ್ತದೆ. ಕಳೆದ ಒಂದೂವರೆ ವರುಷದ ಹಿಂದೆ ತಡೆಗೋಡೆ ಬಿದ್ದು ಪ್ರದೇಶದ ಕೆಲ ಮನೆಗಳಿಗೆ ಅಪಾರ ಹಾನಿಯಾಗಿದೆ.ಇಲ್ಲಿಯ ತನಕ ಜಿಲ್ಲೆ ಅಥವಾ ಸರಕಾರದಿಂದ ತಡೆಗೋಡೆ ನಿರ್ಮಿಸಲು ಅನುದಾನ ಸಿಕ್ಕಿಲ್ಲ. ತನ್ನ ಶಾಸಕ ನಿಧಿಯಿಂದ ಸಾಧ್ಯವಾದಷ್ಟು ಅನುದಾನವನ್ನು ವ್ಯಯಿಸಿ ತಡೆಗೋಡೆ ನಿರ್ಮಾಣ ಕಾಮಗಾರಿಗೂ ಚಾಲನೆ ಕೊಟ್ಟಿದ್ದೇವೆ.

ಕ್ಷೇತ್ರ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗೆ ಸುಮಾರು ಅರುವತ್ತು ಲಕ್ಷ ರೂಪಾಯಿ,ತೊಕ್ಕೊಟ್ಟು ಜಂಕ್ಷನ್ ನಿಂದ ಮುಡಿಪು ರಸ್ತೆ ಸುಸಜ್ಜಿತಗೊಳಿಸಲು 30 ಕೋಟಿ ರೂಪಾಯಿ ಅನುದಾನ ಸರಕಾರದಿಂದ ಬಿಡುಗಡೆಯಾಗಿದೆ. ಚೆಂಬುಗುಡ್ಡೆಯಿಂದ ಪಂಡಿತ್ ಹೌಸ್ ನ ವರೆಗಿನ ನೇರ ಸಂಪರ್ಕ ರಸ್ತೆ ಅಭಿವೃದ್ಧಿಗೆ ಎರಡು ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ ಎಂದರು.

Join Whatsapp
Exit mobile version