Home ಟಾಪ್ ಸುದ್ದಿಗಳು ಪಟ್ಟು ಸಡಿಲಿಸದ ಸಾರಿಗೆ ನೌಕರರು | ನಾಳೆಯಿಂದ ಹೋರಾಟ ತೀವ್ರ; ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ

ಪಟ್ಟು ಸಡಿಲಿಸದ ಸಾರಿಗೆ ನೌಕರರು | ನಾಳೆಯಿಂದ ಹೋರಾಟ ತೀವ್ರ; ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ

ಬೆಂಗಳೂರು : ಸರಕಾರದ ಹಲವು ಎಚ್ಚರಿಕೆಯ ಹೊರತಾಗಿಯೂ ಸಾರಿಗೆ ನೌಕರರು ತಮ್ಮ ಪಟ್ಟು ಬಿಡದೆ, ನಾಳೆಯಿಂದ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುವ ಸೂಚನೆ ನೀಡಿದ್ದಾರೆ. ತಮ್ಮನ್ನು ಸರಕಾರಿ ನೌಕರರನ್ನಾಗಿ ಪರಿಗಣಿಸಬೇಕೆಂಬ ಸಾರಿಗೆ ನೌಕರರ ಬೇಡಿಕೆಯಿರಿಸಿ, ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಗೆ ನಾಳೆ ಇನ್ನಷ್ಟು ತೀವ್ರತೆ ಪಡೆಯಲಿದ್ದು, ಅನಿರ್ದಿಷ್ಠಾವಧಿ ಉಪವಾಸ ಸತ್ಯಾಗ್ರಹ ಕೈಗೊಳ್ಳುವ ಬಗ್ಗೆ ಚಿಂತಿಸಲಾಗಿದೆ.

ನೌಕರರು ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿತ್ತು. ಈ ನಡುವೆ, ಪ್ರತಿಭಟನೆಗೆ ಕೋಡಿಹಳ್ಳಿ ಚಂದ್ರಶೇಖರ್ ಕಾರಣ ಎಂದು ಸಿಎಂ ಯಡಿಯೂರಪ್ಪ ದೂರಿದ್ದರು. ಆದರೆ, ಈ ನಡುವೆ ಸಾರಿಗೆ ನೌಕರರ ಸಂಘದ ಗೌರವಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಇಂದು ಸಭೆ ನಡೆದಿದೆ.

ಸಭೆಯಲ್ಲಿ ಹೋರಾಟದ ಮುಂದಿನ ರೂಪುರೇಷೆಗಳ ಬಗ್ಗೆ ಚರ್ಚಿಸಲಾಗಿದೆ. ನಾಳೆಯಿಂದ ಸಾರಿಗೆ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಉಪವಾಸ ಸತ್ಯಾಗ್ರಹ ಆರಂಭವಾಗಲಿದೆ ಎಂದು ಸಾರಿಗೆ ನೌಕರ ಮುಖಂಡರು ತಿಳಿಸಿರುವುದಾಗಿ ವರದಿಗಳು ತಿಳಿಸಿವೆ.

Join Whatsapp
Exit mobile version