Home ಟಾಪ್ ಸುದ್ದಿಗಳು ಕೋವಿಡ್ 19 ಸಂಕಷ್ಟ | ಕುವೈತ್ ನ ಎಲ್ಲಾ ಭೂ, ಸಮುದ್ರ ಸಾರಿಗೆ ಬಂದ್, ಕಟ್ಟುನಿಟ್ಟಿನ...

ಕೋವಿಡ್ 19 ಸಂಕಷ್ಟ | ಕುವೈತ್ ನ ಎಲ್ಲಾ ಭೂ, ಸಮುದ್ರ ಸಾರಿಗೆ ಬಂದ್, ಕಟ್ಟುನಿಟ್ಟಿನ ಷರತ್ತುಗಳು ಜಾರಿ

ಕತಾರ್ : ನಾಳೆಯಿಂದ ಕುವೈತ್ ನ ಭೂ ಮತ್ತು ಸಮುದ್ರ ಸಾರಿಗೆ ಪೂರ್ಣ ಮುಚ್ಚಲು ಕುವೈತ್ ಸಚಿವ ಸಂಪುಟ ನಿರ್ಧರಿಸಿದೆ. ಶಿಪ್ಪಿಂಗ್ ವ್ಯವಹಾರ ಹೊರತುಪಡಿಸಿ ಉಳಿದ ಎಲ್ಲಾ ಚಟುವಟಿಕೆಗಳನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ. ಕೋವಿಡ್ 19 ಹಿನ್ನೆಲೆಯಲ್ಲಿ ಮುಂದಿನ ಮೂರು ವಾರಕ್ಕೂ ಹೆಚ್ಚು ಕಾಲ ಹಲವು ನಿಯಂತ್ರಣಗಳನ್ನು ಹೇರಲು ನಿರ್ಧರಿಸಲಾಗಿದೆ.

ಆದಾಗ್ಯೂ, ತನ್ನ ನಾಗರಿಕರಿಗೆ ಸ್ವದೇಶಕ್ಕೆ ಮರಳಲು ಅನುಮತಿ ನೀಡಲಾಗಿದೆ. ಶಾಪಿಂಗ್ ಸೆಂಟರ್ ಸೇರಿದಂತೆ ಎಲ್ಲಾ ಮಾಲ್ ಗಳು, ಕೆಫೆಗಳು, ರೆಸ್ಟೋರೆಂಟ್ ಗಳಲ್ಲಿ ಸಾರ್ವಜನಿಕರು ನೆರೆಯುವುದಕ್ಕೆ ನಿಷೇಧ ಹೇರಲಾಗಿದೆ.

ಸರಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ನೌಕರರ ಸಂಖ್ಯೆ ಶೇ.30ಕ್ಕಿಂತ ಹೆಚ್ಚಿರಕೂಡದು ಮತ್ತು ಎಲ್ಲಾ ಸರಕಾರಿ ಸಂಸ್ಥೆಗಳು ನಿಯಮಗಳನ್ನು ಪಾಲಿಸಬೇಕು ಎಂದು ಸರಕಾರ ನಿರ್ಧರಿಸಿದೆ.

ಖಾಸಗಿ ಸಂಸ್ಥೆಗಳು ತನ್ನ ಕಚೇರಿಗಳು, ಕೆಲಸ ಮಾಡುವ ಪ್ರದೇಶಗಳಲ್ಲಿ ಶೇ.50ಕ್ಕಿಂತ ಹೆಚ್ಚು ನೌಕರರನ್ನು ಹೊಂದುವಂತಿಲ್ಲ ಎಂದು ಸಚಿವ ಸಂಪುಟ ನಿರ್ಧರಿಸಿರುವುದಾಗಿ ವರದಿ ತಿಳಿಸಿದೆ.  

Join Whatsapp
Exit mobile version