Home ಕರಾವಳಿ ಕೋಟೆಕಾರು ಬ್ಯಾಂಕ್​​ ದರೋಡೆ ಪ್ರಕರಣ: ಮೂವರು ಆರೋಪಿಗಳ ಬಂಧನ

ಕೋಟೆಕಾರು ಬ್ಯಾಂಕ್​​ ದರೋಡೆ ಪ್ರಕರಣ: ಮೂವರು ಆರೋಪಿಗಳ ಬಂಧನ

ಮಂಗಳೂರು: ಭಾರೀ ಸದ್ದು ಮಾಡಿದ್ದ ಕೋಟೆಕಾರು ಸಹಕಾರಿ ಬ್ಯಾಂಕ್​ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಬ್ಯಾಂಕ್​ನಲ್ಲಿ ಸುಮಾರು 10ರಿಂದ 12 ಕೋಟಿಯನ್ನು ದರೋಡೆ ಮಾಡಿದ ಬಳಿಕ ಆರೋಪಿಗಳು ತಿರುವನ್ವೇಲಿಗೆ ಪರಾರಿಯಾಗಿದ್ದರು. ಇದೀಗ ಮಂಗಳೂರು ಪೊಲೀಸರು ಕಾರ್ಯಚರಣೆ ನಡೆಸಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಖುದ್ದು ಮಂಗಳೂರು ಪೊಲೀಸ್​​ ಆಯುಕ್ತ ಅನುಪಮ್ ಅಗರ್ವಾಲ್​ ಖಚಿತಪಡಿಸಿದ್ದಾರೆ.

ದರೋಡೆಕೋರರ ಬಂಧನದ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್‌ ಮಾಹಿತಿ ನೀಡಿದ್ದು, ತಮಿಳುನಾಡಿನ ವಿವಿಧ ಪ್ರದೇಶದಲ್ಲಿ ಮೂವರು ಆರೋಪಿಗಳ ಬಂಧನವಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ತಾಲೂಕು ಕೆ.ಸಿ.ರೋಡ್‌ನ ಶಾಖೆಯಲ್ಲಿ ಜನವರಿ 17ರಂದು ಕೋಟೆಕಾರು ಬ್ಯಾಂಕ್​​ನಲ್ಲಿ ದರೋಡೆ ಮಾಡಿದ್ದರು. ಮಹಾರಾಷ್ಟ್ರದ ಕಾರು ಬಳಸಿ ಕೋಟೆಕಾರು ಬ್ಯಾಂಕ್​​ನಲ್ಲಿ ಕೃತ್ಯವೆಸಗಿದ್ದರು. ಬ್ಯಾಂಕ್ ದರೋಡೆ ಬಳಿಕ ತಮಿಳುನಾಡಿನ ತಿರುನೆಲ್ವೇಲಿಗೆ ಪರಾರಿ ಆಗಿದ್ದರು. ಬಂಧಿತರಿಂದ 2 ಗೋಣಿಚೀಲ, ತಲ್ವಾರ್‌, 2 ಪಿಸ್ತೂಲ್‌ ಜಪ್ತಿ ಮಾಡಿದ್ದೇವೆ. ಬಂಧಿತ ಆರೋಪಿಗಳು ತಮಿಳುನಾಡಿನ ತಿರುನೆಲ್ವೇಲಿ ಮೂಲದವರು ಎಂದು ಸ್ಪಷ್ಟಪಡಿಸಿದ್ದಾರೆ.

ತಮಿಳುನಾಡು ಮೂಲದ ಮುರುಗಂಡಿ ದೇವರ್, ಪ್ರಕಾಶ್ ಅಲಿಯಾಸ್ ಜೋಶ್ವಾ ,ಮನಿವೆನನ್ ಬಂಧಿತರು. ಇನ್ನು ಬಂಧಿತರಿಂದ ಕಳ್ಳತನಕ್ಕೆ ಬಳಸಿದ್ದ ಫಿಯೆಟ್ ಕಾರು, ಹಣ, ಚಿನ್ನ ತುಂಬಿಕೊಂಡು ಹೋಗಿದ್ದ ಎರಡು ಗೋಣಿ ಚೀಲಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Join Whatsapp
Exit mobile version