Home Uncategorized ಕೊಡಗು: ಕರ್ನಾಟಕದ ಮಹಿಳಾ ಸೀನಿಯರ್ ಹಾಕಿ ತಂಡಕ್ಕೆ ಕೊಡಗಿನ ಮರದಾಳು ಯಶಿಕ ಆಯ್ಕೆ

ಕೊಡಗು: ಕರ್ನಾಟಕದ ಮಹಿಳಾ ಸೀನಿಯರ್ ಹಾಕಿ ತಂಡಕ್ಕೆ ಕೊಡಗಿನ ಮರದಾಳು ಯಶಿಕ ಆಯ್ಕೆ

ಮಡಿಕೇರಿ: ಭೂಪಾಲ್ ನಲ್ಲಿ ಆರಂಭಗೊಂಡಿರುವ ಹಾಕಿ ಪಂದ್ಯಾವಳಿಯಲ್ಲಿ ಕರ್ನಾಟಕದ ಮಹಿಳಾ ಸೀನಿಯರ್ ಹಾಕಿ ತಂಡವನ್ನು ಕೊಡಗಿನ ಮರದಾಳು ವಿನ ಯಶಿಕ ಪ್ರತಿನಿಧಿಸುತ್ತಿದ್ದಾರೆ. 8 ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಗಲೇ ಯಶಿಕ ಮೊದಲ ಪಂದ್ಯವನ್ನು ಜಾರ್ಖಾಂಡ್ ನ ಕರಾಚಿಯಲ್ಲಿ ಆಡಿದರು. ನಂತರದ ದಿನಗಳಲ್ಲಿ ದೆಹಲಿ, ಪಂಜಾಬ್, ಒರಿಸ್ಸಾ, ತಮಿಳುನಾಡು, ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ 20ಕ್ಕೂ ಹೆಚ್ಚು ಬಾರಿ ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ.

ಇಲ್ಲಿಯವರೆಗೆ ಸುಮಾರು 63 ಕ್ಕಿಂತ ಅಧಿಕ ಪದಕಗಳನ್ನು ಗೆದ್ದಿದ್ದಾರೆ. ನಾಯಕಿಯಾಗಿಯೂ ಒಂದು ವರ್ಷ ಕಾಲ ಕರ್ನಾಟಕ ತಂಡವನ್ನು ಮುನ್ನಡೆಸಿದ್ದಾರೆ. 2020ರಲ್ಲಿ ಚೆನ್ನೈನಲ್ಲಿ ನಡೆದ ಸೌತ್ಜೋನ್ ಕ್ರೀಡಾಕೂಟ,  ಪೊನ್ನಂಪೇಟೆಯಲ್ಲಿ ನಡೆದ ವಿಶ್ವ ವಿದ್ಯಾನಿಲಯ ಮಟ್ಟದ ಸೌತ್ ಜೋನ್ ಪಂದ್ಯಾವಳಿಯಲ್ಲಿ ಇವರು ಪ್ರತಿನಿಧಿಸಿದ್ದ ಜಯ ಸಾಧಿಸಿದೆ.

ರಾಜಸ್ಥಾನದಲ್ಲಿ ನಡೆದ ಆಲ್ ಇಂಡಿಯಾ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಯಶಿಕ  ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಮೈಸೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ್ದು, ತಂಡ ಬೆಳ್ಳಿ ಪದಕ ಪಡೆದುಕೊಂಡಿದೆ. ಈ ಪಂದ್ಯಾವಳಿಯಲ್ಲಿ ಇವರು ದಾಖಲೆಯ 8 ಗೋಲುಗಳನ್ನು ಬಾರಿಸಿ ಯಶಸ್ವೀ ಹಾಕಿಪಟು ಎನಿಸಿಕೊಂಡಿದ್ದಾರೆ.

ಫಾರವರ್ಡ್ ಆಟಗಾರ್ತಿ ಮತ್ತು ಮುಖ್ಯ ಸ್ಟೈಕರ್ ಆಗಿ ಪ್ರತಿನಿಧಿಸಿಯೂ ಯಶಸ್ವಿಯಾಗಿದ್ದಾರೆ. ಇಲ್ಲಿಯವರೆಗೆ ಯಶಿಕ ಒಟ್ಟು 45 ಕ್ಕೂ ಹೆಚ್ಚು ಗೋಲುಗಳನ್ನು ದಾಖಲಿಸಿದ್ದಾರೆ.

ಚೇರಳ ಗ್ರಾಮ (ನೆಲ್ಲಿಹಡ್ಲು) ಚೆಟ್ಟಳ್ಳಿ ನಿವಾಸಿ ಮರದಾಳು ಗೋಪಾಲ (ವಿಠಲ) ಹಾಗೂ ನಾಗರತ್ನ ಅವರ ಪುತ್ರಿ ಮರದಾಳು ಯಶಿಕ ಚೆಟ್ಟಳ್ಳಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7ನೇ ತರಗತಿಯವರೆಗೆ ವ್ಯಾಸಂಗ ಮಾಡಿದರು. ನಂತರ ಪೊನ್ನಂಪೇಟೆ ಸಾಯಿ ಹಾಕಿ ಕೇಂದ್ರಕ್ಕೆ ಸೇರ್ಪಡೆಯಾಗಿ 8 ರಿಂದ 10 ನೇ ತರಗತಿವರೆಗೆ ಪೂರೈಸಿದರು. ಮೈಸೂರಿನ ಟೆರೇಸ್ಸನ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿ ಬಿಎ ವಿದ್ಯಾಭ್ಯಾಸದ ಜೊತೆಗೆ ಹಾಕಿ ಪಂದ್ಯಾವಳಿಗೆ ಯಶಿಕ ತಮ್ಮ ಸಮಯವನ್ನು ಮೀಸಲಿಟ್ಟಿದ್ದಾರೆ

Join Whatsapp
Exit mobile version