ಕೊಡಗು: ಕಾರ್ಮಿಕ ವಿಧವೆ ಮಹಿಳೆಗೆ ವಂಚನೆ, ವಕೀಲೆ ಸಹಿತ ಇಬ್ಬರ ಬಂಧನ

Prasthutha|

ಮಡಿಕೇರಿ: ವಿರಾಜಪೇಟೆಯ  ಬಡ ಕಾರ್ಮಿಕ ವಿಧವೆ ದಲಿತ ಮಹಿಳೆ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಸಾಲ ಪಡೆದು ವಂಚಿಸಿ ಬೆದರಿಕೆ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರಾಜಪೇಟೆಯ ವಕೀಲೆ ಹಾಗೂ ಆಕೆಯ ಗಂಡನನ್ನು ಪೊಲೀಸರು ಸಿದ್ದಾಪುರದಲ್ಲಿ ಬಂಧಿಸಿದರು.

- Advertisement -

 ವಿರಾಜಪೇಟೆ ವಕೀಲೆ ನಿಶಾ ಮತ್ತು ಆಕೆಯ ಗಂಡ ಪ್ರಕಾಶ್ ವಿರುದ್ಧ ವಿರಾಜಪೇಟೆ ನಗರ ಠಾಣೆಯಲ್ಲಿ 323, 354, 504, 420, 506, ರೆ/ವಿ 34 IPC ಕಲಂ ನಡಿ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಆರೋಪಿ ವಕೀಲೆ ಹಾಗೂ ಗಂಡ ಪ್ರಕಾಶ್ ಸಿದ್ದಾಪುರದಲ್ಲಿ ತಲೆಮರೆಸಿಕೊಂಡಿದ್ದರು. ಸೋಮವಾರ ಬೆಳಿಗ್ಗೆ ಸಿದ್ದಾಪುರದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Join Whatsapp
Exit mobile version