Home ಟಾಪ್ ಸುದ್ದಿಗಳು ಪೊಲೀಸರ ನಿರಂತರ ತಾರತಮ್ಯ ನೀತಿ ಖಂಡಿಸಿ SDPI ಯಿಂದ ನಾಳೆ ಕೊಡಗು SP ಕಚೇರಿ ಚಲೋ

ಪೊಲೀಸರ ನಿರಂತರ ತಾರತಮ್ಯ ನೀತಿ ಖಂಡಿಸಿ SDPI ಯಿಂದ ನಾಳೆ ಕೊಡಗು SP ಕಚೇರಿ ಚಲೋ

ಕೊಡಗು: ಜಿಲ್ಲೆಯಲ್ಲಿ ನಿರಂತರವಾಗಿ ಮುಸ್ಲಿಮರ ವಿರುದ್ದ ಪೊಲೀಸ್ ಇಲಾಖೆ ನಡೆಸಿಕೊಂಡು ಬರುತ್ತಿರುವ ತಾರತಮ್ಯ ಧೋರಣೆಯನ್ನು ಖಂಡಿಸಿ SDPI ವತಿಯಿಂದ ನವೆಂಬರ್ 25ರಂದು SP ಕಚೇರಿ ಚಲೋ ನಡೆಯಲಿದೆ.


ಕಳೆದ ಮೂರು ತಿಂಗಳಿನಿಂದ ಕರ್ನಾಟಕದಾದ್ಯಂತ ಸಂಘಪರಿವಾರ ಮುಸ್ಲಿಮರ ಮೇಲೆ ನಿರಂತರ ದಾಳಿ ನಡೆಸುತ್ತಿದ್ದು, ಕೊಡಗಿನ ಶನಿವಾರ ಸಂತೆಯಲ್ಲೂ ಎರಡು ಪ್ರಕರಣ ವರದಿಯಾಗಿತ್ತು. ಈ ಪ್ರಕರಣಗಳಲ್ಲಿ ಪೊಲೀಸರು ತಾರತಮ್ಯ ಧೋರಣೆ ಅನುಸರಿಸಿದ್ದಾರೆ.


ಇತ್ತೀಚೆಗೆ ಶನಿವಾರಸಂತೆಯಲ್ಲಿ ಇಬ್ಬರು ಮುಸ್ಲಿಮ್ ವಿದ್ಯಾರ್ಥಿನಿಯರು ತರಗತಿ ಮುಗಿಸಿ ಬಸ್ಸ್ ಗಾಗಿ ಕೆ.ಆರ್.ಸಿ.ವೃತ್ತದ ಬಳಿ ನಿಂತಿದ್ದಾಗ ಸಂಘಪರಿವಾರದ ಕಾರ್ಯಕರ್ತರು ಇವರಿಬ್ಬರನ್ನು ಸಮೀಪದ ಕಾಂಪ್ಲೆಕ್ಸ್ ಒಂದಕ್ಕೆ ಎಳೆದೊಯ್ದು ಅವರು ಧರಿಸಿದ ಬುರ್ಖಾವನ್ನು ಹರಿದು ಹಾಕಿ ವಿದ್ಯಾರ್ಥಿನಿಯರ ಕೆನ್ನೆಗೆ ಹಾಗೂ ಭುಜಕ್ಕೆ ಹೊಡೆದು ಎಳೆದಾಡಿದ್ದರು. ಪರಿಣಾಮ ಮಕ್ಕಳಿಗೆ ತೀವ್ರ ಗಾಯಗಳಾಗಿದ್ದವು. ಈ ಪ್ರಕರಣದಲ್ಲಿ ಮತ್ತು ಎರಡು ತಿಂಗಳ ಹಿಂದೆ ಗರಗಂದೂರಿನಲ್ಲಿ ನಡೆದ ಘಟನೆಯಲ್ಲೂ ಪೋಲಿಸ್ ಇಲಾಖೆ ತಾರತಮ್ಯ ಧೋರಣೆ ಮಾಡಿತ್ತು, ಸಂಘಪರಿವಾರದ ಕಾರ್ಯಕರ್ತರು ಅಂಬೇಡ್ಕರ್ ಝಿಂದಾಬಾದ್ ಘೋಷಣೆಯನ್ನು ಪಾಕಿಸ್ತಾನ್ ಝಿಂದಾಬದ್ ಎಂದು ತಿರುಚಿ ಬಂದ್ ಮಾಡಿದ್ದರು. ಮೂವರ ಮೇಲೆ ಪ್ರಕರಣ ದಾಖಲಾಗಿತ್ತು. ಆದರೆ ಲಘು ಸೆಕ್ಷನ್ ಹಾಕಿರುವುದು ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಅದೇ ರೀತಿ ಇತ್ತೀಚೆಗೆ ಶನಿವಾರಸಂತೆ ನಿವಾಸಿ ಜಾಕಿರ್ ಪಾಷ ಅವರು ತನ್ನ ಪತ್ನಿ, ಮಕ್ಕಳೊಂದಿಗೆ ಕಾರಿನಲ್ಲಿ ತನ್ನ ವೈಯಕ್ತಿಕ ಕಾರ್ಯದ ನಿಮಿತ್ತ ಮೈಸೂರಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಎರಡು ಬೈಕ್ ಗಳಲ್ಲಿ ಬಂದ ನಾಲ್ವರು ಸಂಘಪರಿವಾರದ ದುಷ್ಕರ್ಮಿಗಳು, ಕಾರಿಗೆ ಅಡ್ಡ ಬಂದು ಅಸಭ್ಯವಾಗಿ ವರ್ತಿಸಿ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲು ಮಾಡಲು ಹೋದಂತಹ ಸಂದರ್ಭದಲ್ಲಿ ಅಮಾಯಕರ ವಿರುದ್ದವೇ ಸುಳ್ಳು ಮೊಕದ್ದಮೆ ಹಾಕಿ ಬಂಧಿಸಿರುವಂತಹ ಪೋಲಿಸರ ಕ್ರಮ ಖಂಡನೀಯವಾಗಿದೆ. ಈ ಹಿನ್ನೆಲೆಯಲ್ಲಿ ಸಂಘಪರಿವಾರವನ್ನು ಸೋಲಿಸೋಣ-ಸಂವಿಧಾನವನ್ನು ಉಳಿಸೋಣ ಎಂಬ ಘೋಷಣೆಯೊಂದಿಗೆ ಚೌಕಿ ವೃತ್ತದಿಂದ SP ಕಚೇರಿಗೆ ರ‍್ಯಾಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Join Whatsapp
Exit mobile version