Home ಟಾಪ್ ಸುದ್ದಿಗಳು ರೈತರ ಆಸ್ತಿಗೆ ವಕ್ಫ್ ನೋಟಿಸ್ ಕೊಟ್ಟಿದ್ರೆ ವಾಪಸ್ ಪಡೆಯುತ್ತೇವೆ: ಝಮೀರ್ ಅಹ್ಮದ್

ರೈತರ ಆಸ್ತಿಗೆ ವಕ್ಫ್ ನೋಟಿಸ್ ಕೊಟ್ಟಿದ್ರೆ ವಾಪಸ್ ಪಡೆಯುತ್ತೇವೆ: ಝಮೀರ್ ಅಹ್ಮದ್

ವಿಜಯನಗರ: ವಕ್ಫ್ ಆಸ್ತಿ ಯಾರ ಆಸ್ತಿ ಅಲ್ಲ. ಸರಕಾರದಿಂದ ಒಂದು ಇಂಚು ಆಸ್ತಿ ಕೂಡ ಪಡೆದಿಲ್ಲ. ಹಿರಿಯರು ದಾನವಾಗಿ ಕೊಟ್ಟಿರುವ ಆಸ್ತಿ ಅದು. ರೈತರ ಆಸ್ತಿಗೆ ನೋಟೀಸ್ ಕೊಟ್ರೆ ವಾಪಸ್ ಪಡೆಯುತ್ತೇವೆ ಎಂದು ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.

ಸಿಎಂ ಸಿದ್ದರಾಮಯ್ಯ ಸಾಹೇಬರೇ ಹೇಳಿದ್ದಾರೆ ರೈತರ ಆಸ್ತಿಗೆ ನೋಟೀಸ್ ಕೊಡಬೇಡಿ ಅಂತ. ಹಿಂದೆ ಬಿಜೆಪಿ ಸರಕಾರದಲ್ಲೂ ವಕ್ಫ್ ಆಸ್ತಿ ತೆಗೆದುಕೊಂಡವರಿಗೆ ನೂರಾರು ನೋಟೀಸ್ ಕೊಟ್ಟಿದ್ದಾರೆ ಎಂದರು.

ಲವ್ ಜಿಹಾದ್ ರೀತಿ ಲ್ಯಾಂಡ್ ಜಿಹಾದ್ ನಡೆಯುತ್ತಿದೆ ಎಂಬ ಸಿಟಿ ರವಿ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿಟಿ ರವಿ ರಾಜಕಾರಣ ಮಾಡಬೇಕು ಎದುರಿಸುತ್ತೇವೆ. ಸಿಟಿ ರವಿ ಸಚಿವ ಇದ್ದಾಗ 2008 ರಲ್ಲೂ ನೋಟೀಸ್ ಕೊಟ್ಟಿದ್ದಾರೆ. ರಾಜಕೀಯ ಮಾಡಿ ಜನರ ದಾರಿ ತಪ್ಪಿಸಬೇಡಿ. ವಕ್ಫ್ ಆಸ್ತಿಯನ್ನು ಖಬರಸ್ತಾನಕ್ಕೆ, ಸ್ಮಶಾನಕ್ಕೆ ಕೊಡುವುದಕ್ಕೆ ಅಭ್ಯಂತರ ಇಲ್ಲ ಎಂದರು.

Join Whatsapp
Exit mobile version