Home ಟಾಪ್ ಸುದ್ದಿಗಳು ಕೊಡಗು: ಬಿಜೆಪಿಯಿಂದ ಕಾಂಗ್ರೆಸ್ ಮುಖಂಡರ ವಿರುದ್ಧ ದೂರು ದಾಖಲು

ಕೊಡಗು: ಬಿಜೆಪಿಯಿಂದ ಕಾಂಗ್ರೆಸ್ ಮುಖಂಡರ ವಿರುದ್ಧ ದೂರು ದಾಖಲು

ಮಡಿಕೇರಿ: ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಬಿಜೆಪಿ ನಾಯಕರ ವಿರುದ್ದ ಅಶ್ಲೀಲ ಪದ ಬಳಕೆ, ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ಮುಖಂಡರ ವಿರುದ್ಧ ಬಿಜೆಪಿ ಮಡಿಕೇರಿ ಪೊಲೀಸರಿಗೆ ದೂರು ನೀಡಿದ್ದಾರೆ.

ಮಡಿಕೇರಿ ನಗರಸಭಾ ಸದಸ್ಯೆ ಅನಿತಾ ಪೂವಯ್ಯ ಕಾಂಗ್ರೆಸ್ ಮುಖಂಡರ ವಿರುದ್ಧ ದೂರು ನೀಡಿದ್ದಾರೆ.

ಕಾಂಗ್ರೆಸ್ ಮುಖಂಡರಾದ ಎ.ಎಸ್ ಪೊನ್ನಣ್ಣ, ಮಂಥರ್ ಗೌಡ, ಹೊಸೂರು ಸೂರಜ್, ತೆನ್ನೀರ ಮೈನ, ಹಾಕತ್ತೂರು ಖಲೀದ್, ಪ್ರಕಾಶ್ ಆಚಾಯ೯, ಚಂದ್ರಶೇಖರ್, ಶಾಫಿ, ಮೋಹನ್ ದಾಸ್ ಸೇರಿದಂತೆ 16 ಮಂದಿಯ ವಿರುದ್ದ ದೂರು ದಾಖಲಾಗಿದೆ.

Join Whatsapp
Exit mobile version