Home ಟಾಪ್ ಸುದ್ದಿಗಳು ಕೊಡಗು: ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ಹಾರಾಡುತ್ತಿರುವ ಭಗವಧ್ವಜ

ಕೊಡಗು: ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ಹಾರಾಡುತ್ತಿರುವ ಭಗವಧ್ವಜ

ಮಡಿಕೇರಿ: ಅಮೃತ ಮಹೋತ್ಸವದ ಅಂಗವಾಗಿ ದೇಶಾದ್ಯಂತ ಮೂರು ದಿನಗಳ ಕಾಲ ರಾಷ್ಟ್ರಧ್ವಜ ಹಾರಿಸಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಹಿನ್ನೆಲೆಯಲ್ಲಿ ಕೊಡುಗೆ ಜಿಲ್ಲೆಯಲ್ಲೂ ಮನೆ ಮನೆಗಳಲ್ಲಿ ಹಾಗೂ ಪಟ್ಟಣ, ಗ್ರಾಮಗಳಲ್ಲಿ ತಿರಂಗ ರಾರಾಜಿಸುತ್ತಿದೆ.

ಗ್ರಾಮ ಪಂಚಾಯತಿ ಮಟ್ಟದಿಂದ ಅಂಗಡಿಗಳಿಗೆ ಹಾಗೂ ಮನೆಗಳಿಗೆ ತಿರಂಗವನ್ನು ವಿತರಿಸಲಾಗಿದೆ. ಇಂದು ಬೆಳಿಗ್ಗಿನಿಂದ ಜಿಲ್ಲೆಯಾದ್ಯಂತ ಗ್ರಾಮೀಣ ಭಾಗಗಳಿಂದ ಹಿಡಿದು ನಗರ ಪ್ರದೇಶದ ಜನತೆ ಅಮೃತ ಮಹೋತ್ಸವನ್ನು ಆಚರಿಸುತ್ತಿದ್ದಾರೆ. ಆದರೆ ಕೊಡಗಿನ ಕೆಲವು ಭಾಗಗಳಲ್ಲಿ ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ಭಗವಧ್ವಜ ಹಾರಾಡುತ್ತಿದೆ.

ಕುಶಾಲನಗರ ತಾಲ್ಲೂಕಿನ ಚೆಟ್ಟಳ್ಳಿ ಪಟ್ಟಣದಲ್ಲಿರುವ ಬಹುತೇಕ ಅಂಗಡಿಗಳಲ್ಲಿ ರಾಷ್ಟ್ರಧ್ವಜ ಹಾರಾಡುತ್ತಿದ್ದರೆ, ಪಟ್ಟಣದಲ್ಲಿರುವ ನರೇಂದ್ರ ಮೋದಿ ರೈತ ಸಹಕಾರ ಭವನದ ಪಕ್ಕದಲ್ಲಿರುವ ಧ್ವಜ ಸ್ತಂಭದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲಾಗಿಲ್ಲ. ಬದಲಾಗಿ  ಪಟ್ಟಣದಲ್ಲಿ ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ಭಗವಾಧ್ವಜ ಹಾರಾಡುತ್ತಿದೆ. ಸಮೀಪದಲ್ಲೇ ಚೆಟ್ಟಳ್ಳಿ ಗ್ರಾಮ ಪಂಚಾಯತಿ ಕಾರ್ಯಾಲಯ ಇದೆ. ಇಲ್ಲಿ ಹಾರಿಸಲಾಗಿರುವ ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ಭಗವಧ್ವಜ ಹಾರಾಡುತ್ತಿದೆ.

ಜಿಲ್ಲೆಯ ಕೆಲವು ಭಾಗಗಳಲ್ಲಿ ರಾಷ್ಟ್ರಧ್ವಜವನ್ನು ಹಗ್ಗದಲ್ಲಿ ಕಟ್ಟಿ ನೇತು ಹಾಕಲಾಗಿದೆ. ಧ್ವಜಸ್ತಂಭಗಳಲ್ಲಿ ಭಗವಧ್ವಜ ಹಾರಾಡುತ್ತಿದೆ.

Join Whatsapp
Exit mobile version