ಲಂಡನ್: ಬ್ರಿಟನ್‌ನ ಕಿಂಗ್ ಚಾರ್ಲ್ಸ್ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ ಮತ್ತು ಸಾರ್ವಜನಿಕ ಕರ್ತವ್ಯಗಳನ್ನು ಮುಂದೂಡಲಿದ್ದಾರೆ ಎಂದು ಬಕಿಂಗ್ಹ್ಯಾಮ್ ಅರಮನೆ ಹೇಳಿಕೆಯಲ್ಲಿ ತಿಳಿಸಿದೆ.
73 ವರ್ಷದ ಕಿಂಗ್ ಚಾರ್ಲ್ಸ್ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಎಂದು ಬಕಿಂಗ್ಹ್ಯಾಮ್ ಅರಮನೆ ದೃಢಪಡಿಸಿದೆ.
ಕಿಂಗ್‌ಗೆ ಬಂದಿರುವುದು ಪ್ರಾಸ್ಟೇಟ್ ಕ್ಯಾನ್ಸರ್ ಅಲ್ಲ, ಬದಲಿಗೆ ವಿಸ್ತೃತ ಪ್ರಾಸ್ಟೇಟ್ ಎಂದೂ ತಿಳಿಸಲಾಗಿದೆ. ಕ್ಯಾನ್ಸರ್‌ನ ನಿಖರ ಸ್ವರೂಪವನ್ನು ಬಹಿರಂಗಪಡಿಸಲಾಗಿಲ್ಲ, ಆದರೆ ಕಿಂಗ್ ಚಾರ್ಲ್ಸ್ ನಿಯಮಿತ ಚಿಕಿತ್ಸೆಗಳನ್ನು ಪ್ರಾರಂಭಿಸಿದ್ದಾರೆ ಎಂದು ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದೆ.
ಸವಾಲಿನ ಸಂದರ್ಭಗಳ ಹೊರತಾಗಿಯೂ ಬ್ರಿಟನ್ ದೊರೆ ತನ್ನ ಚಿಕಿತ್ಸೆಯ ಬಗ್ಗೆ ಸಂಪೂರ್ಣವಾಗಿ ಸಕಾರಾತ್ಮಕವಾಗಿದ್ದಾರೆ ಮತ್ತು ಸಾಧ್ಯವಾದಷ್ಟು ಬೇಗ ಪೂರ್ಣ ಸಾರ್ವಜನಿಕ ಕರ್ತವ್ಯಕ್ಕೆ ಮರಳಲು ಎದುರು ನೋಡುತ್ತಿದ್ದಾರೆ ಎಂದು ಬಕಿಂಗ್ಹ್ಯಾಮ್ ಅರಮನೆ ಹೇಳಿದೆ.