Home ಟಾಪ್ ಸುದ್ದಿಗಳು ನಿಗದಿತ ಸಮಯಕ್ಕೆ ಅರಳದ ಹೂವು, ಮೇಲ್ವಿಚಾರಕನನ್ನು 6 ತಿಂಗಳು ಕಾರ್ಮಿಕರ ಶಿಬಿರಕ್ಕೆ ಕಳುಹಿಸಿದ ಸರ್ವಾಧಿಕಾರಿ...

ನಿಗದಿತ ಸಮಯಕ್ಕೆ ಅರಳದ ಹೂವು, ಮೇಲ್ವಿಚಾರಕನನ್ನು 6 ತಿಂಗಳು ಕಾರ್ಮಿಕರ ಶಿಬಿರಕ್ಕೆ ಕಳುಹಿಸಿದ ಸರ್ವಾಧಿಕಾರಿ ಕಿಮ್ ಜಾಂಗ್ !

ಉತ್ತರ ಕೊರಿಯಾ: ಯಾರೂ ಊಹಿಸಲಾಗದ ವಿಚಿತ್ರ ಕಾನೂನುಗಳನ್ನು ಜಾರಿಗೊಳಿಸುವ ಮೂಲಕ ಸದಾ ಸುದ್ದಿಯಲ್ಲಿರುವ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಇದೀಗ ಮತ್ತೊಂದು ಅಚ್ಚರಿಯ ಆದೇಶ ನೀಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ನಿಗದಿತ ಸಮಯಕ್ಕೆ ಹೂವುಗಳು ಅರಳದ ಕಾರಣಕ್ಕೆ, ಹೂದೋಟದ ಮೇಲ್ವಿಚಾರಕನನ್ನು 6 ತಿಂಗಳುಗಳ ಕಾಲ ಕಾರ್ಮಿಕ ಶಿಬಿರಕ್ಕೆ ಕಳುಹಿಸಲು ಕಿಮ್ ಜಾಂಗ್ ಆದೇಶಿಸಿದ್ದಾರೆ.
ಉತ್ತರ ಕೊರಿಯಾದ ಸಂಸ್ಥಾಪಕರಾಗಿದ್ದ ಎರಡನೇ ಕಿಮ್ ಸಂಗ್ ಜನ್ಮದಿನಾಚರಣೆಯ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಹೂವುಗಳ ತೋಟ ರಚನೆಗೆ ಒಂದು ತಿಂಗಳ ಮೊದಲೇ ಸೂಚನೆ ನೀಡಲಾಗಿತ್ತು. ಈ ಹೋದೋಟದಲ್ಲಿ ಕಿಮಿಲ್’ಸುಂಗಿಯಾ ಎಂಬ ಹೈಬ್ರಿಡ್ ಓರ್ಕಿಡ್ ಹೂವುಗಳು ಮುಖ್ಯ ಆಕರ್ಷಣೆ ಆಗಿತ್ತು. ಹೂವಿನ ಗಿಡಗಳಿದ್ದ ಗ್ರೀನ್’ಹೌಸ್’ನ ಮೇಲ್ವಿಚಾರಣೆಯನ್ನು ಹ್ಯಾನ್ ಎಂಬಾತನಿಗೆ ವಹಿಸಲಾಗಿತ್ತು. ಆದರೆ ಕಾರ್ಯಕ್ರಮದ ದಿನ ಸಮೀಪಿಸಿದರೂ ಹೈಬ್ರಿಡ್ ಓರ್ಕಿಡ್ ಹೂವುಗಳು ಅರಳಿರಲಿಲ್ಲ. ಇದರಿಂದ ಕೊಪಗೊಂಡ ಸರ್ವಾಧಿಕಾರಿ ಕಿಮ್, ಗ್ರೀನ್’ಹೌಸ್’ನ ಮ್ಯಾನೇಜರ್ ಹ್ಯಾನ್’ನನ್ನು ಆರು ತಿಂಗಳುಗಳ ಕಾಲ ಕಾರ್ಮಿಕ ಶಿಬಿರಕ್ಕೆ ಕಳುಹಿಸುವ ಆದೇಶ ನೀಡಿದ್ದಾರೆ.
ಉರುವಲುಗಳ ಕೊರತಯೇ
ಹೂವುಗಳು ನಿಗದಿತ ಸಮಯದಲ್ಲಿ ಅರಳದಿರಲು ಕಾರಣ ಎಂದು ಹ್ಯಾನ್ ಹೇಳಿದ್ದಾರೆ.

10 ದಿನಗಳ ಕಾಲ ನಗುವಂತಿಲ್ಲ !

ಕಳೆದ ವಾರವಷ್ಟೇ, ಉತ್ತರ ಕೊರಿಯಾ ಮಾಜಿ ನಾಯಕ ಕಿಮ್ ಜಾಂಗ್ ಇಲ್ ಅವರ 10ನೇ ಪುಣ್ಯಸ್ಮರಣೆ ಪ್ರಯುಕ್ತ ಮುಂದಿನ 10 ದಿನಗಳ ಕಾಲ ಉತ್ತರ ಕೊರಿಯಾ ನಾಗರಿಕರು ನಗುವುದನ್ನು ಸರ್ವಾಧಿಕಾರಿ ಕಿಮ್ ನಿಷೇಧಿಸಿದ್ದರು. ಈ ದಿನಗಳಲ್ಲಿ ಶೋಕಿಸಬೇಕಾಗಿದೆ, ಸಂತೋಷವಾಗಿರಲು ಅಥವಾ ನಗಲು ಸಾಧ್ಯವಿಲ್ಲ. ಯಾರಾದರೂ ಮದ್ಯಪಾನ ಮಾಡುತ್ತಿರುವುದು ಕಂಡುಬಂದರೆ ಅವರಿಗೆ ನೇರವಾಗಿ ಮರಣದಂಡನೆ ವಿಧಿಸುವುದಾಗಿ ಸರ್ವಾಧಿಕಾರಿ ಕಿಂಗ್ ಜಾಂಗ್ ಉನ್ ಪ್ರಕಟಿಸಿದ್ದರು.

Join Whatsapp
Exit mobile version