Home ಟಾಪ್ ಸುದ್ದಿಗಳು TEDx ಭಾಷಣ| ‘ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್’ ನಲ್ಲಿ ಸ್ಥಾನ ಪಡೆದ ಐದು ವರ್ಷದ ಬಾಲಕಿ

TEDx ಭಾಷಣ| ‘ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್’ ನಲ್ಲಿ ಸ್ಥಾನ ಪಡೆದ ಐದು ವರ್ಷದ ಬಾಲಕಿ

ಚೆನ್ನೈ: ಐದು ವರ್ಷದ ಭಾರತೀಯ-ಅಮೆರಿಕನ್ ಬಾಲಕಿ ಕಿಯಾರಾ ಕೌರ್ ವಿಶ್ವದ ಅತ್ಯಂತ ಕಿರಿಯ TEDx ಸ್ಪೀಕರ್ ಆಗಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿದ್ದಾಳೆ.

ನವೆಂಬರ್ 14 ರಂದು ಮಕ್ಕಳ ದಿನಾಚರಣೆಯಂದು ಮಹಾರಾಷ್ಟ್ರದಲ್ಲಿ ನಡೆದ TEDx ಸಭೆಯಲ್ಲಿ ಮಾತನಾಡಿದ ಕಿಯಾರಾ ಲಂಡನ್ ನ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿದ್ದಾಳೆ.

ಈ ಕುರಿತು ಪ್ರತಿಕ್ರಿಯಿಸಿದ ಕಿಯಾರಾ, ಲಂಡನ್ ನ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿರುವುದು ತನಗೆ ಖುಷಿ ತಂದಿದೆ ಎಂದು ಹೇಳಿದ್ದಾಳೆ.
ಆಕೆಯ ಭಾಷಣ ಕೇಳುತ್ತಿದ್ದ ಪ್ರೇಕ್ಷಕರು ನಿರಂತರವಾಗಿ ಚಪ್ಪಾಳೆ ತಟ್ಟುತ್ತಿದ್ದರು. ಅವಳ ಓದುವ ಅಭ್ಯಾಸವೇ ಸಭೆಯಲ್ಲಿ ಭಾಷಣ ಮಾಡುವ ಸಾಮರ್ಥ್ಯವನ್ನು ನೀಡಿದೆ ಎಂದು ಹೇಳಲಾಗಿದೆ. ಕಿಯಾರಾ ಕಡಿಮೆ ಅವಧಿಯಲ್ಲಿ 2,000 ಕ್ಕೂ ಹೆಚ್ಚು ಪುಸ್ತಕಗಳನ್ನು ಓದಿದ್ದಾಳೆ.

ಕಿಯಾರ ಈಗ ತಮ್ಮದೇ ಆದ ಪುಸ್ತಕವನ್ನು ಬರೆದಿದ್ದಾಳೆ. ತನ್ನ ಪುಸ್ತಕ ‘ದಿ ಡೈರಿ ಆಫ್ ಆನ್ ಎ5 ಇಯರ್ ಓಲ್ಡ್ ಜೀನಿಯಸ್ ಚಾಟರ್ ಬಾಕ್ಸ್ ಹೂ ಸೆಟ್ ವರ್ಲ್ಡ್ ರೆಕಾರ್ಡ್ಸ್’ ಅನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದ್ದಾಳೆ.

ಅಮೆರಿಕದಲ್ಲಿ ಜನಿಸಿದ ಕಿಯಾರ ಈಗ ಅಬುಧಾಬಿಯಲ್ಲಿ ನೆಲೆಸಿದ್ದಾಳೆ.

Join Whatsapp
Exit mobile version