Home ಟಾಪ್ ಸುದ್ದಿಗಳು ಸಿದ್ದರಾಮಯ್ಯ ಹಾಗೂ ಬೆಂಬಲಿಗರನ್ನು ಮುಗಿಸಲು ಕಾಂಗ್ರೆಸ್ ಸುಪಾರಿ: ಎಂ.ಪಿ.ರೇಣುಕಾಚಾರ್ಯ

ಸಿದ್ದರಾಮಯ್ಯ ಹಾಗೂ ಬೆಂಬಲಿಗರನ್ನು ಮುಗಿಸಲು ಕಾಂಗ್ರೆಸ್ ಸುಪಾರಿ: ಎಂ.ಪಿ.ರೇಣುಕಾಚಾರ್ಯ

ಬೆಂಗಳೂರು: ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರನ್ನು ಮೂಲೆಗುಂಪು ಮಾಡಲು ದೆಹಲಿ ನಾಯಕರೇ ಕೆಪಿಸಿಸಿಗೆ ಸುಪಾರಿ ನೀಡಿದ್ದಾರೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಗಂಭೀರ ಆರೋಪ ಮಾಡಿದ್ದಾರೆ.

ಬುಧವಾರ ವಿಧಾನಸೌಧದದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಮತ್ತು ರಾಜ್ಯ ಉಸ್ತುವಾರಿ ರಂದೀಪ್ಸಿಂಡಗ್ ಸುರ್ಜೆವಾಲಾ ಅವರು ಸಿದ್ದರಾಮಯ್ಯ ಮತ್ತು ಬೆಂಬಲಿಗರನ್ನು ಮೂಲೆಗುಂಪು ಮಾಡುವಂತೆ ಸೂಚಿಸಿದ್ದಾರೆ. ಹೀಗಾಗಿ ಆತಂತರಿಕ ಕಚ್ಚಾಟ ಕಾಂಗ್ರೆಸ್ನಸಲ್ಲಿ ಆರಂಭವಾಗಿದೆ ಎಂದು ದೂರಿದರು.

ಸಿದ್ದರಾಮಯ್ಯನವರನ್ನು ಕಾಂಗ್ರೆಸ್ನತಲ್ಲಿ ಮೂಲೆಗುಂಪು ಮಾಡಲು ಅವರ ಪಕ್ಷದವರೇ ವ್ಯವಸ್ಥಿತ ಷಡ್ಯಂತ್ರ ನಡೆಸಿದ್ದಾರೆ. ಇತ್ತೀಚೆಗೆ ಅವರ ಬೆಂಬಲಿಗರನ್ನು ತುಳಿಯುವ ಪ್ರಯತ್ನ ಅಗ್ರಗಣ್ಯ ನಾಯಕರಿಂದ ನಡೆಯುತ್ತಿದೆ
ಹೀಗಾಗಿಯೇ ಮಂಗಳವಾರ ಅವರ ಭಾಷಣಕ್ಕೆ ಅಡ್ಡಿಪಡಿಸಲಾಯಿತು ಎಂದು ಆರೋಪಿಸಿದರು.

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್ನಎ ಕಾರ್ಯದರ್ಶಿ ಇಮ್ರಾನ್ಪಾಯಷಾ ವಿರುದ್ಧ ಗುಡುಗಿದ ಅವರು, ಕರ್ನಾಟಕಕ್ಕೆ ಬಂದು ವಿವಾದಾತ್ಮಕ ಹೇಳಿಕೆಗಳನ್ನು ಕೊಟ್ಟರೆ ಏನು ಮಾಡಬೇಕೋ ಅದನ್ನೇ ಮಾಡುತ್ತೇವೆ. ನಾವು ಟಿಪ್ಪು ವಂಶಸ್ಥರು. ಯಾರ ತಲೆ ಬೇಕಾದರೂ ತೆಗೆಯುತ್ತೇವೆ ಎಂದು ಇಮ್ರಾನ್ ಪಾಷಾ ಹೇಳಿದ್ದಾರೆ. ಕರ್ನಾಟಕಕ್ಕೆ ಬಂದು ಈ ರೀತಿ ಹೇಳಿಕೆಗಳನ್ನು ಕೊಟ್ಟರೆ ನಾವು ಸುಮ್ಮನಿರುವುದಿಲ್ಲ. ಏನು ಮಾಡಬೇಕೋ ಅದನ್ನೇ ಮಾಡುತ್ತೇವೆ ಎಂದು ನೇರ ಎಚ್ಚರಿಕೆ ಕೊಟ್ಟರು.

ಪ್ರಧಾನಿ ನರೇಂದ್ರ ‌ ಮೋದಿ ಅವರು ಜಾತಿ,
ಧರ್ಮ ಯಾವುದನ್ನೂ ನೋಡದೆ ಸಬ್ಕಾಳ ಸಾತ್ ಸಬ್ಕಾಸ ವಿಕಾಸ್ ಎಂಬಂತೆ ಎಲ್ಲರನ್ನೂ ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ. ಅವರ ಏಳ್ಗೆಯನ್ನು ಸಹಿಸದ ಕೆಲವರು ಬೇಕಾಬಿಟ್ಟಿ ಹೇಳಿಕೆಯನ್ನು ಕೊಡುತ್ತಿದ್ದಾರೆ. ಇದರಿಂದ ಸಮಾಜದಲ್ಲಿ ಕೋಮಸಂಘರ್ಷಗಳು ಉಂಟಾದರೆ ಅವರೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಶಾಸಕ ಜಮೀರ್ ಅಹಮ್ಮದ್ ಖಾನ್ ಈಗಲಾದರೂ ಅರ್ಥ ಮಾಡಿಕೊಂಡು ಇಂತಹ ಹೇಳಿಕೆಗಳನ್ನು ಕೊಡಬಾರದು ಎಂದು ತಮ್ಮ ಸಮುದಾಯದವರಿಗೆ ಸಲಹೆ ಮಾಡಬೇಕು. ಅಲ್ಪಸಂಖ್ಯಾತರ ಅಧ್ಯಕ್ಷರ ಕಾರ್ಯಕ್ರಮದಲ್ಲಿ ಜಮೀರ್ ಅಹಮ್ಮದ್ ಅವರನ್ನು ಆಹ್ವಾನ ಮಾಡಿರಲಿಲ್ಲ ಎಂದು ಅವರ ಕಾರ್ಯಕರ್ತೆರೇ ಗಲಾಟೆ ಮಾಡಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ನರವರು ಅಲ್ಪಸಂಖ್ಯಾತರ ಉದ್ದಾರಕರು ಎಂದು ಹೇಳಿಕೊಂಡು ತಿರುಗುತ್ತಿದ್ದರು. ಈವರೆಗೂ ಅವರನ್ನು ಬಳಸಿಕೊಂಡು ಬಿಸಾಡಿದ್ದಾರೆ. ಈಗಲಾದರೂ ಆ ಸಮುದಾಯ ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಬಿಜೆಪಿಯು ಅಲ್ಪಸಂಖ್ಯಾತರ ಕಾಲೋನಿ, ಮಸೀದಿ, ಖಬರಸ್ತಾನ್ ಸೇರಿದಂತೆ ಅವರ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲಾ ರೀತಿಯ ಸವಲತ್ತುಗಳನ್ನು ಕೊಟ್ಟಿದೆ ಎಂದರು.

ನಮ್ಮ ಸರ್ಕಾರ ಅಕಾರಕ್ಕೆ ಬಂದ ಮೇಲೆ ಎಲ್ಲಿಯೂ ಕೋಮುಗಲಭೆಗಳು ಸಂಭವಿಸಿಲ್ಲ. ಕೆಲವು ಘಟನೆಗಳು ಹೊರತುಪಡಿಸಿದರೆ ಗಂಭೀರ ಪ್ರಕರಣಗಳು ನಡೆದಿಲ್ಲಘಿ. ರಾಜಕೀಯಕ್ಕೋಸ್ಕರ ಕೆಲವರು ಇಂತಹ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾರೆ ಎಂದು ವಾಗ್ದಾಳಿ ಮಾಡಿದರು.

ಕಾಂಗ್ರೆಸ್ನ ವರೇ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದರು. ದಲಿತರು ಕೂಡಾ ಆ ಪಕ್ಷವನ್ನು ನಂಬುತ್ತಿಲ್ಲ ಎಂದು ತಿಳಿಸಿದರು.

ಬಹಿರಂಗಪಡಿಸಿ: ಬಿಟ್ಕಾತಯಿನ್ ಪ್ರಕರಣದಲ್ಲಿ ಬಿಜೆಪಿ ನಾಯಕರು ಶಾಮೀಲಾಗಿದ್ದರೆ ಅವರ ಹೆಸರುಗಳನ್ನು ದಾಖಲೆ ಸಮೇತ ಕಾಂಗ್ರೆಸ್ನನವರು ಬಹಿರಂಗಪಡಿಸಬೇಕೆಂದು ರೇಣುಕಾಚಾರ್ಯ ಸವಾಲು ಹಾಕಿದರು.

ನಿಮ್ಮ ಅವಯಲ್ಲೇ ನಡೆದಿದ್ದ ಈ ಪ್ರಕರಣವನ್ನು ನಮ್ಮ ಸರ್ಕಾರ ಅಕಾರಕ್ಕೆ ಬಂದ ಮೇಲೆ ತಾರ್ತಿಕ ಅಂತ್ಯಕ್ಕೆ ಕೊಂಡೊಯ್ಯಲು ಮುಂದಾಗಿದೆ. ಬಿಜೆಪಿಯವರು ಶಾಮೀಲಾಗಿದ್ದರೆ ಹೆಸರು ಬಹಿರಂಗಪಡಿಸಿ ಎಂದು ಆಗ್ರಹಿಸಿದರು.

ಕಾಂಗ್ರೆಸ್ ಯಾವಾಗಲೂ ಹಿಟ್ ಆ್ಯಂಡ್ ರನ್ ಸಂಸ್ಕೃತಿಯನ್ನು ಮಾಡುತ್ತದೆ. ಅವೇಶನದಲ್ಲಿ ಚರ್ಚೆಗೆ ಬನ್ನಿ ಅಲ್ಲಿಯೇ ಉತ್ತರ ಕೊಡುತ್ತೇವೆ. ಈ ಪ್ರಕರಣದಲ್ಲಿ ನಿಮ್ಮ ಪಕ್ಷದ ಮಕ್ಕಳೇ ಶಾಮೀಲಾಗಿದ್ದಾರೆ. ಪ್ರಾರಂಭದಲ್ಲಿ ಅಬ್ಬರಿಸಿ ಈಗ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಅವೇಶನದಲ್ಲಿ ನಾವು ಕೂಡ ಚರ್ಚೆಗೆ ಸಿದ್ಧರಿದ್ದೇವೆ. ಆದರೆ, ನಾವು ಹಾವು ಬಿಡುತ್ತೇವೆ ಎಂದು ಹೇಳುವುದಿಲ್ಲಘಿ. ಕಾಂಗ್ರೆಸ್ನ ವರದ್ದು ಮಣ್ಣು ಮುಕ್ಕು ಹಾವು ಇದ್ದಂಗೆ. ಇದು ಎರಡು ತಲೆಯ ರೀತಿಯಲ್ಲಿ ಇದೆ ಎಂದು ಟೀಕಾಪ್ರಹಾರ ನಡೆಸಿದರು.

Join Whatsapp
Exit mobile version