Home ಟಾಪ್ ಸುದ್ದಿಗಳು ಎಐಸಿಸಿ ಅಧ್ಯಕ್ಷರಾಗಿ ಖರ್ಗೆ ಅಧಿಕಾರ ಸ್ವೀಕಾರ: CWC ಸದಸ್ಯರು, AICC ಪ್ರಧಾನ ಕಾರ್ಯದರ್ಶಿಗಳಿಂದ ರಾಜೀನಾಮೆ

ಎಐಸಿಸಿ ಅಧ್ಯಕ್ಷರಾಗಿ ಖರ್ಗೆ ಅಧಿಕಾರ ಸ್ವೀಕಾರ: CWC ಸದಸ್ಯರು, AICC ಪ್ರಧಾನ ಕಾರ್ಯದರ್ಶಿಗಳಿಂದ ರಾಜೀನಾಮೆ

ನವದೆಹಲಿ: ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ನೇಮಕಗೊಳ್ಳುತ್ತಿದ್ದಂತೆ ಹಳೆಯ ಎಐಸಿಸಿ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು ರಾಜೀನಾಮೆ ನೀಡಿದ್ದಾರೆ.

ಅಧ್ಯಕ್ಷರ ಬದಲಾವಣೆಯಾಗುತ್ತಿದ್ದಂತೆ ಹಳೆ ಸಮಿತಿ ಅನೂರ್ಜಿತಗೊಂಡಿದ್ದು, ಶೀಘ್ರವೇ ಹೊಸ ಸದಸ್ಯರ ನೇಮಕಾತಿ ನಡೆಯಲಿದೆ.

ಸಿಡಬ್ಲ್ಯುಸಿ ಸದಸ್ಯರು, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು, ಎಲ್ಲಾ ಉಸ್ತುವಾರಿಗಳು ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು ಎಂದು ಸಂಸದ ಕೆ.ಸಿ.ವೇಣುಗೋಪಾಲ್ ತಿಳಿಸಿದರು.

ಶೀಘ್ರವೇ ಪಕ್ಷ ಸಂಘಟನೆಗಾಗಿ ನೂತನ ಎಐಸಿಸಿ ಸದಸ್ಯರ ನೇಮಕಾತಿ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

Join Whatsapp
Exit mobile version