ನನವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಗುಲಾಂ ನಬಿ ಆಜಾದ್ ಕಾಂಗ್ರೆಸ್‌ನ ವಂಶಪಾರಂಪರ್ಯ ರಾಜಕಾರಣದ ಬಲಿಪಶುಗಳು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ
ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ‘ವಂದನಾ ನಿರ್ಣಯ’ದಲ್ಲಿ ಮಾತನಾಡಿದ ಪ್ರಧಾನಿ ಮಾತಿನುದ್ದಕ್ಕೂ ಪ್ರತಿಪಕ್ಷಗಳನ್ನು ವ್ಯಂಗ್ಯ , ಟೀಕೆ ಮಾಡಿದ್ದಾರೆ.
ದೀರ್ಘಕಾಲ ಪ್ರತಿಪಕ್ಷದಲ್ಲಿ ಉಳಿಯುವ ಪ್ರತಿಪಕ್ಷಗಳ ನಿರ್ಧಾರವನ್ನು ನಾನು ಪ್ರಶಂಸಿಸುತ್ತೇನೆ. ನೀವು ಹಲವು ದಶಕಗಳಿಂದ ಆಡಳಿತದಲ್ಲಿ ಕುಳಿತುಕೊಂಡಿದ್ದಿರಿ, ಅದೇ ರೀತಿ ನೀವು ಅಲ್ಲಿ (ವಿರೋಧ ಪಕ್ಷದಲ್ಲಿ) ಕುಳಿತುಕೊಳ್ಳಲು ನಿರ್ಧರಿಸಿದ್ದೀರಿ. ಸಾರ್ವಜನಿಕರು ಖಂಡಿತವಾಗಿಯೂ ನಿಮಗೆ ಆಶೀರ್ವಾದ ಮಾಡುತ್ತಾರೆ ಎಂದರು.
ನಿಮ್ಮಲ್ಲಿ ಅನೇಕರು (ಪ್ರತಿಪಕ್ಷಗಳು) ಚುನಾವಣೆಯಲ್ಲಿ ಸ್ಪರ್ಧಿಸುವ ಧೈರ್ಯವನ್ನು ಸಹ ಕಳೆದುಕೊಂಡಿದ್ದೀರಿ ಎಂದು ನಾನು ನೋಡುತ್ತೇನೆ. ಕಳೆದ ಬಾರಿಯೂ ಕೆಲವು ಸ್ಥಾನಗಳನ್ನು ಬದಲಾಯಿಸಲಾಗಿದೆ ಎಂದು ಮೋದಿ ಹೇಳಿದರು.
ಅನೇಕ ಜನರು ಈ ಬಾರಿಯೂ ತಮ್ಮ ಸ್ಥಾನಗಳನ್ನು ಬದಲಾಯಿಸಲು ನೋಡುತ್ತಿದ್ದಾರೆ ಎಂದು ನಾನು ಕೇಳಿದ್ದೇನೆ. ಅನೇಕ ಜನರು ಈಗ ಲೋಕಸಭೆಯ ಬದಲು ರಾಜ್ಯಸಭೆಗೆ ಹೋಗಲು ಬಯಸುತ್ತಾರೆ ಎಂದು ನಾನು ಕೇಳಿದ್ದೇನೆ ಎಂದರು.