Home ಟಾಪ್ ಸುದ್ದಿಗಳು ಕೇರಳ | ಮುಸ್ಲಿಮ್ ಪತ್ರಕರ್ತರನ್ನು ಹತ್ಯೆಗೈದ ಆರೋಪಿ ಜಿಲ್ಲಾಧಿಕಾರಿಯಾಗಿ ನೇಮಕ; ಮುಸ್ಲಿಮ್ ಜಮಾಅತ್ ಪ್ರತಿಭಟನೆ

ಕೇರಳ | ಮುಸ್ಲಿಮ್ ಪತ್ರಕರ್ತರನ್ನು ಹತ್ಯೆಗೈದ ಆರೋಪಿ ಜಿಲ್ಲಾಧಿಕಾರಿಯಾಗಿ ನೇಮಕ; ಮುಸ್ಲಿಮ್ ಜಮಾಅತ್ ಪ್ರತಿಭಟನೆ

ಕೇರಳ: ಮುಸ್ಲಿಮ್ ಪತ್ರಕರ್ತರನ್ನು ಹತ್ಯೆಗೈದ ಆರೋಪಿ ಐ.ಎ.ಎಸ್ ಅಧಿಕಾರಿಯನ್ನು ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿರುವುದನ್ನು ವಿರೋಧಿಸಿ ಸಾವಿರಾರು ಮಂದಿ ಪ್ರತಿಭಟನೆ ನಡೆಸಿದ್ದಾರೆ.

ಪತ್ರಕರ್ತರ ಕೊಲೆ ಆರೋಪಿಯಾಗಿದ್ದ ಶ್ರೀರಾಮ್ ವೆಂಕಟರಾಮನ್ ಎಂಬವರನ್ನು ಆಲಪುಝ ಜಿಲ್ಲಾಧಿಕಾರಿಯಾಗಿ ನೇಮಿಸಿರುವುದನ್ನು ವಿರೋಧಿಸಿ ಕೇರಳ ಮುಸ್ಲಿಮ್ ಜಮಾಅತ್ ಸಂಘಟನೆ ರಾಜಧಾನಿ ತಿರುವನಂತಪುರಮ್ ನ ಸೆಕ್ರೆಟರಿಯೇಟ್ ಕಚೇರಿ ಜಾಥಾ ಮತ್ತು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿಗಳ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿತ್ತು.

ಆರೋಪಿಯಾಗಿದ್ದ ವೆಂಕಟರಾಮನ್ ಅವರು ಪ್ರಮುಖ ಮುಸ್ಲಿಮ್ ಯುವ ಪತ್ರಕರ್ತ ಕೆ.ಎಂ. ಬಶೀರ್ ಅವರ ಸಾವಿಗೆ ಸಂಬಂಧಿಸಿದಂತೆ ನ್ಯಾಯಾಲಯದ ವಿಚಾರಣೆ ಎದುರಿಸುತ್ತಿದ್ದರು. ಪಾನಮತ್ತರಾಗಿ ವಾಹನ ಚಲಾಯಿಸಿ ಪರಿಣಾಮ ಉಂಟಾದ ಅಪಘಾತದಲ್ಲಿ ಬಶೀರ್ ಅವರು ಸಾವನ್ನಪ್ಪಿದ್ದರು.

35 ವರ್ಷ ಪ್ರಾಯದ ಕೆ.ಎಂ. ಬಶೀರ್ ಅವರು ಕೇರಳ ಮುಸ್ಲಿಮ್ ಜಮಾಅತ್, ಇದರ ಮಾತೃ ಸಂಘಟನೆಯಾದ ಎಪಿ ಸಮಸ್ತದ ಅಧೀನದಲ್ಲಿರುವ ಸಿರಾಜ್ ಡೈಲಿಯ ಮುಖ್ಯಸ್ಥರಾಗಿದ್ದರು.

ಈ ಮಧ್ಯೆ ಆರೋಪಿ ವೆಂಕಟರಾಮನ್ ಅವರ ನೇಮಕವನ್ನು ರದ್ದುಗೊಳಿಸಬೇಕೆಂದು ಸಾವಿರಾರು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

”ಕ್ರಿಮಿನಲ್ ಆರೋಪ ಎದುರಿಸುತ್ತಿರುವ ವ್ಯಕ್ತಿಯನ್ನು ಜಿಲ್ಲಾಧಿಕಾರಿಯಾಗಿ ನೇಮಿಸುವ ಮೂಲಕ ಸರಕಾರ ಜನರಿಗೆ ತಪ್ಪು ಸಂಕೇತಗಳನ್ನು ರವಾನಿಸುತ್ತಿದೆ. ಇದು ಕಾನೂನಿಗೆ ಸವಾಲಾಗಿ ಪರಿಣಮಿಸಲಿದ್ದು, ಇದು ಕಾನೂನನ್ನು ನಾಶಪಡಿಸುತ್ತದೆ. ಇದು ಜನರಿಗೆ ಸವಾಲಾಗಿದೆ ಎಂದು ಕೇರಳ ಮುಸ್ಲಿಂ ಜಮಾತ್ ರಾಜ್ಯ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಫೈಝಿ ವಂಡೂರ್ ತಿಳಿಸಿದರು.

ವೆಂಕಟರಾಮನ್ ಅವರ ನೇಮಕವನ್ನು ರದ್ದುಪಡಿಸುವವರೆಗೂ ತಮ್ಮ ಸಂಘಟನೆಯು ಈ ಪ್ರತಿಭಟನೆಯನ್ನು ಮುಂದುವರೆಸಲಿದೆ ಎಂದು ಅವರು ತಿಳಿಸಿದ್ದಾರೆ.

ವೆಂಕಟರಾಮನ್ ಅವರು ಜುಲೈ 26 ರಂದು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

ಪ್ರಸ್ತುತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ವೆಂಕಟರಾಮನ್ ಅವರು 2019 ರಲ್ಲಿ ಬಶೀರ್ ಹತ್ಯೆಯಲ್ಲಿ ಅವರ ಪಾತ್ರದ ಆರೋಪವನ್ನು ಹೊಂದಿದ್ದಾರೆ. ಈ ಪ್ರಕರಣದಲ್ಲಿ ವೆಂಕಟರಾಮನ್ ಅವರು ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಮತ್ತು ಸಾಕ್ಷ್ಯವನ್ನು ತಿರುಚಲು ಪ್ರಯತ್ನಿಸಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

Join Whatsapp
Exit mobile version