Home ಟಾಪ್ ಸುದ್ದಿಗಳು ಕೇರಳ | ಬಾಲಕನಲ್ಲಿ ನಿಫಾ ವೈರಸ್ ಪತ್ತೆ,‌ ಸಂಪರ್ಕಿತರಿಗೆ ಕ್ವಾರಂಟೈನ್

ಕೇರಳ | ಬಾಲಕನಲ್ಲಿ ನಿಫಾ ವೈರಸ್ ಪತ್ತೆ,‌ ಸಂಪರ್ಕಿತರಿಗೆ ಕ್ವಾರಂಟೈನ್

ತಿರುವನಂತಪುರಂ: ಕೇರಳದಲ್ಲಿ ಡೆಂಗ್ಯೂ ಆತಂಕದ ಜೊತೆಗೆ 14 ವರ್ಷದ ಬಾಲಕನಲ್ಲಿ ನಿಫಾ ವೈರಸ್ ಪತ್ತೆಯಾಗಿದೆ. ಇದರ ಪರಿಣಾಮ ಇದೀಗ ಹೈ ಅಲರ್ಟ್ ಘೋಷಿಸಲಾಗಿದೆ.

ಮಲಪ್ಪುರಂ ಜಿಲ್ಲೆಯಲ್ಲಿ ನಿಫಾ ವೈರಸ್ ಪತ್ತೆಯಾಗಿದೆಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಸ್ಪಷ್ಟಪಡಿಸಿದ್ದಾರೆ. ಬಾಲಕನ ಮೊದಲ ಸಂಪರ್ಕಿತರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲು ಸೂಚಿಸಲಾಗಿದೆ ಎಂದಿದ್ದಾರೆ.

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 14 ವರ್ಷದ ಬಾಲಕನ ಮಾದರಿಗಳನ್ನು ಪುಣೆ ಎನ್‌ಐವಿ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ. ಇದೀಗ ವರದಿ ಬಂದಿದ್ದು, ನಿಫಾ ವೈರಸ್ ದೃಢಪಟ್ಟಿದೆ. ನಿಫಾ ವೈರಸ್ ಖಚಿತವಾಗುತ್ತಿದ್ದಂತ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಬಾಲಕನನ್ನು ಇದೀಗ ಕೋಝಿಕೋಡ್ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಸ್ಥಳಾಂತರಿಸಲು ಸೂಚಿಸಲಾಗಿದೆ. ಇದೀಗ ಬಾಲಕನ ಸಂಪರ್ಕಿತರನ್ನು ಪತ್ತೆ ಹಚ್ಚಲಾಗುತ್ತಿದೆ. ಪೋಷಕರು ಸೇರಿದಂತೆ ಮೊದಲ ಸಂಪರ್ಕಿತರನ್ನು ಈಗಾಗಲೇ ಐಸೋಲೇಶನ್ ಮಾಡಲಾಗಿದೆ. ಇವರ ಮಾದರಿಗಳನ್ನು ಸಂಗ್ರಹಿಸಿ ಪುಣೆಗೆ ಕಳುಹಿಸಲಾಗಿದೆ ಎಂದು ಸಚಿವೆ ತಿಳಿಸಿದ್ದಾರೆ.

14 ವರ್ಷದ ಬಾಲಕನಲ್ಲಿ ನಿಫಾ ವೈರಸ್ ಪತ್ತೆಯಾಗಿದೆ. ಸದ್ಯ ಬಾಲಕನಿಗೆ ವೆಂಟಿಲೇಟರ್ ಬೆಂಬಲದೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆ ಸುತ್ತು ಮುತ್ತ, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವಂತೆ ಆರೋಗ್ಯ ಸಚಿವೆ ಮನವಿ ಮಾಡಿದ್ದಾರೆ. ಜನರು ಯಾವದೇ ಭಯ ಪಡುವ ಅಗತ್ಯವಿಲ್ಲ. ಪಕ್ಷಿಗಳು ಕಚ್ಚಿರುವ ಹಣ್ಣುಗಳನ್ನು ಬಳಸಬಾರದು. ಹಣ್ಣುಗಳನ್ನು ತೊಳೆದು ಉಪಯೋಗಿಸಬೇಕು. ನಿಫಾ ವೈರಸ್ ರೋಗ ಲಕ್ಷಣಗಳನ್ನು ಕುರಿತು ಜನರಿಗೆ ಅರಿವು ಮೂಡಿಸಲು ಸೂಚಿಸಲಾಗಿದೆ ಎಂದು ವೀಣಾ ಜಾರ್ಜ್ ಮಾಹಿತಿ ನೀಡಿದ್ದಾರೆ.

Join Whatsapp
Exit mobile version