Home ಟಾಪ್ ಸುದ್ದಿಗಳು ಉ‌.ಪ್ರ | SP ನಾಯಕನ ಹತ್ಯೆ: BJP ನಾಯಕ ಮತ್ತು ಮಕ್ಕಳ ವಿರುದ್ಧ ಪ್ರಕರಣ ದಾಖಲು

ಉ‌.ಪ್ರ | SP ನಾಯಕನ ಹತ್ಯೆ: BJP ನಾಯಕ ಮತ್ತು ಮಕ್ಕಳ ವಿರುದ್ಧ ಪ್ರಕರಣ ದಾಖಲು

ಗೊಂಡಾ: ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ಸಮಾಜವಾದಿ ಪಕ್ಷದ ಸ್ಥಳೀಯ ನಾಯಕನನ್ನು ಹತ್ಯೆ ಮಾಡಲಾಗಿದ್ದು, ಬಿಜೆಪಿ ಕೌನ್ಸಿಲರ್ ಮತ್ತು ಅವರ ಮೂವರು ಪುತ್ರರು ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪರಸಾಪುರ ಪಟ್ಟಣದ ರಾಜಾ ತೋಲಾದಲ್ಲಿನ ಬಿಎಸ್ಪಿ ನಾಯಕ ಓಂ ಪ್ರಕಾಶ್ ಸಿಂಗ್ ಮನೆಗೆ ನುಗ್ಗಿ ಅವರನ್ನು ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿ ಹತ್ಯೆಗೈಯಲಾಗಿತ್ತು.

ಶನಿವಾರ ಬೆಳಗ್ಗೆ ಪ್ರತಿಭಟನೆ ನಡೆಸಿದ ಮೃತರ ಕುಟುಂಬ ಮತ್ತು ಪಕ್ಷದ ನಾಯಕರು, ಅಂತಿಮ ವಿಧಿವಿಧಾನಗಳನ್ನು ಮಾಡಲು ನಿರಾಕರಿಸಿದರು. ಸಿಂಗ್ ಅವರ ಮೃತದೇಹವನ್ನು ರಸ್ತೆ ಮೇಲಿಟ್ಟು ಆರೋಪಿಗಳ ನಂತರವೇ ಅಂತಿಮ ವಿಧಿವಿಧಾನಗಳನ್ನು ನಡೆಸಲಾಗುವುದು ಎಂದು ಪಟ್ಟು ಹಿಡಿದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸಿಂಗ್ ಅವರ ಪತ್ನಿ ನೀಲಂ ನೀಡಿದ ದೂರಿನ ಆಧಾರದ ಮೇಲೆ, ಪರಸ್‌ಪುರ ನಗರ ಪಂಚಾಯತ್‌ನ ಬಿಜೆಪಿ ಕೌನ್ಸಿಲರ್ ಉದಯಭನ್ ಸಿಂಗ್ ಅಲಿಯಾಸ್ ಲಲ್ಲನ್ ಸಿಂಗ್ ಮತ್ತು ಅವರ ಮೂವರು ಪುತ್ರರು ಸೇರಿದಂತೆ ಐದು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪರಸ್‌ಪುರ ಪೊಲೀಸ್ ಠಾಣೆ ಪ್ರಭಾರಿ ದಿನೇಶ್ ಸಿಂಗ್ ಹೇಳಿದ್ದಾರೆ. ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ತಂಡವನ್ನು ರಚಿಸಲಾಗಿದೆ. ಓಂ ಪ್ರಕಾಶ್ ಸಿಂಗ್ ಎಸ್‌ಪಿ ಚಿಹ್ನೆಯಡಿ ನಗರ ಪಂಚಾಯತ್ ಚುನಾವಣೆಯಲ್ಲಿ ಕೌನ್ಸಿಲರ್ ಸ್ಥಾನಕ್ಕೆ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ಉದಯಭಾನ್ ಸಿಂಗ್ ವಿರುದ್ಧ ಸೋತಿದ್ದರು ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.

Join Whatsapp
Exit mobile version