Home ಟಾಪ್ ಸುದ್ದಿಗಳು ಕೇರಳ ರಾಜ್ಯಪಾಲರ ಆದೇಶ:  ನಾನು ರಾಜೀನಾಮೆ ನೀಡುವುದಿಲ್ಲ ಎಂದ ಕಣ್ಣೂರು ವಿಶ್ವವಿದ್ಯಾಲಯದ ವಿಸಿ

ಕೇರಳ ರಾಜ್ಯಪಾಲರ ಆದೇಶ:  ನಾನು ರಾಜೀನಾಮೆ ನೀಡುವುದಿಲ್ಲ ಎಂದ ಕಣ್ಣೂರು ವಿಶ್ವವಿದ್ಯಾಲಯದ ವಿಸಿ

ತಿರುವನಂತಪುರಂ: ಕೇರಳದ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರು ರಾಜ್ಯದ 9 ವಿಶ್ವವಿದ್ಯಾಲಯಗಳ ಉಪಕುಲಪತಿಗಳ ರಾಜೀನಾಮೆ ನೀಡಲು ಆದೇಶಿಸಿದ ಬೆನ್ನಲ್ಲೇ ನಾನು ರಾಜೀನಾಮೆ ನೀಡುವುದಿಲ್ಲ ಎಂದು ಕಣ್ಣೂರು ವಿಶ್ವವಿದ್ಯಾಲಯದ ಉಪಕುಲಪತಿ ಗೋಪಿನಾಥ್ ರವೀಂದ್ರನ್ ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಗೋಪಿನಾಥ್ ರವೀಂದ್ರನ್, ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರ ನಿರ್ಧಾರವನ್ನು ನಾನು ಸ್ವೀಕರಿಸಿದ್ದೇನೆ. ಆದರೆ ನಾನು ನನ್ನ ರಾಜೀನಾಮೆಯನ್ನು ಸಲ್ಲಿಸುವುದಿಲ್ಲ. ವಿಸಿ ಅವರ ರಾಜೀನಾಮೆಯು ಹಣಕಾಸಿನ ಅಕ್ರಮಗಳು ಅಥವಾ ಕೆಟ್ಟ ನಡವಳಿಕೆಯನ್ನು ಆಧರಿಸಿದೆ. ಆದರೆ ಇದು ಯಾವುದೂ ಇಲ್ಲಿ ಸಂಭವಿಸಿಲ್ಲ. ಇದು ಸುಳ್ಳಾರೋಪ ಎಂದರು.

ರಾಜ್ಯಪಾಲ ಆರಿಫ್ ಖಾನ್ ಅವರು ರಾಜ್ಯದ ವಿಶ್ವವಿದ್ಯಾಲಯಗಳ ಕುಲಾಧಿಪತಿಯೂ ಆಗಿದ್ದಾರೆ.

Join Whatsapp
Exit mobile version