Home ಟಾಪ್ ಸುದ್ದಿಗಳು ಕೇರಳದಲಿ ಸ್ಫೋಟ: ಪಿಣರಾಯಿ ವಿಜಯನ್ ಗೆ ಕರೆ ಮಾಡಿದ ಅಮಿತ್ ಶಾ

ಕೇರಳದಲಿ ಸ್ಫೋಟ: ಪಿಣರಾಯಿ ವಿಜಯನ್ ಗೆ ಕರೆ ಮಾಡಿದ ಅಮಿತ್ ಶಾ

ಕೊಚ್ಚಿ: ಎರ್ನಾಕುಲಂನ ಕಲಮಸ್ಸೆರಿಯಾ ಕ್ರಿಶ್ಚಿಯನ್ ಗ್ರೂಪ್ ಕನ್ವೆನ್ಷನ್ ಕೇಂದ್ರದಲ್ಲಿ ಸಂಭವಿಸಿದ ಸ್ಫೋಟ ಸಂಬಂಧ ಗೃಹ ಸಚಿವ ಅಮಿತ್ ಶಾ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ಗೆ ಕರೆ ಮಾಡಿ ರಾಜ್ಯದ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದರು.

ಕಲಮಸ್ಸೆರಿಯಲ್ಲಿ ಇಂದು ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಓರ್ವ ವ್ಯಕ್ತಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೇರಳಕ್ಕೆ ತಂಡಗಳನ್ನು ರವಾನಿಸಿ ತನಿಖೆ ಆರಂಭಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್ಜಿ) ಗೆ ನಿರ್ದೇಶನ ನೀಡಿದ್ದಾರೆ.

ಮಹಿಳೆಯೊಬ್ಬರು ಬೆಂಕಿಯಿಂದ ಸಾವನ್ನಪ್ಪಿದ್ದಾರೆ, ಪ್ರಾಥಮಿಕ ವಿಶ್ಲೇಷಣೆಯ ಪ್ರಕಾರ ಎರಡು ಸ್ಫೋಟಗಳು ಸತತವಾಗಿ ನಡೆದಿವೆ. ಒಬ್ಬ ವ್ಯಕ್ತಿ ಆಸ್ಪತ್ರೆಯಲ್ಲಿದ್ದಾರೆ. 36 ಜನರು ಗಾಯಗೊಂಡಿದ್ದು, ಅವರನ್ನು ರಾಜಗಿರಿ ಮತ್ತು ಸನ್ ರೈಸ್ ನ ಆಸ್ಟರ್ ಮೆಡಿಸಿಟಿಗೆ ದಾಖಲಿಸಲಾಗಿದೆ. ಇದೊಂದು ಅಸಾಮಾನ್ಯ ಅಪಘಾತ. ಎಲ್ಲಾ ಏಜೆನ್ಸಿಗಳು ಪ್ರಾಥಮಿಕ ಪರೀಕ್ಷೆಗಾಗಿ ಇಲ್ಲಿವೆ ಎಂದು ಕೇರಳ ಸಚಿವ ವಿ.ಎನ್. ವಾಸವನ್ ಹೇಳಿದ್ದಾರೆ.

Join Whatsapp
Exit mobile version