Home ಟಾಪ್ ಸುದ್ದಿಗಳು ಕೇರಳದಲ್ಲೂ ಕಾಂಗ್ರೆಸ್ ನಲ್ಲಿ ಪಕ್ಷಾಂತರ ಪರ್ವ | ಪಕ್ಷಕ್ಕೆ ಕೈಕೊಟ್ಟ ಹಿರಿಯ ನಾಯಕ

ಕೇರಳದಲ್ಲೂ ಕಾಂಗ್ರೆಸ್ ನಲ್ಲಿ ಪಕ್ಷಾಂತರ ಪರ್ವ | ಪಕ್ಷಕ್ಕೆ ಕೈಕೊಟ್ಟ ಹಿರಿಯ ನಾಯಕ

ಕೇರಳ ವಿಧಾನಸಭೆಗೆ ಕೆಲವು ತಿಂಗಳುಗಳು ಬಾಕಿ ಇರುವಾಗಲೇ ಕಾಂಗ್ರೆಸ್ ಹಿರಿಯ ನಾಯಕ ಪಿಸಿ ಚಾಕೋ ಪಕ್ಷದಿಂದ ಹೊರನಡೆದಿದ್ದಾರೆ. ಸದ್ಯ ಇದು ಕೇರಳ ಕಾಂಗ್ರೆಸಿಗೆ ಭಾರೀ ಹಿನ್ನಡೆಯಾಗಿದೆ.

ಕಾಂಗ್ರೆಸ್ ಹಿರಿಯ ಮುಖಂಡ ಪಿಸಿ ಚಾಕೋ ಪಕ್ಷಕ್ಕೆ ವಿದಾಯ ಹೇಳಿದ್ದು ತನ್ನ ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ರವಾನೆ ಮಾಡಿದ್ದಾರೆ. ಕಾಂಗ್ರೆಸ್‌ʼನಲ್ಲಿ ಬಣಗಳು ಹುಟ್ಟಿಕೊಂಡಿವೆ ಎಂದು ಹೇಳಿದ ಅವರು ಪಕ್ಷದಲ್ಲಿ ಪ್ರಜಾಪ್ರಭುತ್ವ ಉಳಿದಿಲ್ಲ ಎಂದು ಆರೋಪಿಸಿದ್ದಾರೆ.

ಕೇರಳದಲ್ಲಿ 140 ಕ್ಷೇತ್ರದಲ್ಲಿಚುನಾವಣೆ ನಡೆಯಲಿದ್ದು ಏಪ್ರಿಲ್ 06ರಂದು ಮತದಾನ ನಡೆಯಲಿದೆ.

Join Whatsapp
Exit mobile version