ಕೇರಳ | ಸುನ್ನತ್ ಮಾಡುವ ವೇಳೆ ಅರವಳಿಕೆಯಿಂದ ಮಗು ಮೃತ್ಯು

- Advertisement -

ತಿರುವನಂತಪುರ: ಮುಸ್ಲಿಮರ ಧಾರ್ಮಿಕ ಪದ್ಧತಿಯಂತೆ ಸುನ್ನತ್ ಮಾಡುವ ವೇಳೆ 2 ತಿಂಗಳ ಮಗು ಸಾವಿಗೀಡಾಗಿರುವ ಘಟನೆ ಕೇರಳದಲ್ಲಿ ನಡೆದಿದೆ.

- Advertisement -

‘ಕೋಯಿಕ್ಕೋಡ್‌ ಜಿಲ್ಲೆಯ ಕಕ್ಕೂರ್‌ ನಲ್ಲಿ ಸುನ್ನತಿ ಮಾಡಲೆಂದು ಅರಿವಳಿಕೆ ನೀಡಿದ ಬಳಿಕ ಅಸ್ವಸ್ಥಗೊಂಡು ಮಗು ಅಸುನೀಗಿದೆ.

ರಾಜ್ಯದ ಮುಸ್ಲಿಂ ಸಮುದಾಯದಲ್ಲಿ ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಸುನ್ನತಿ ಮಾಡುವುದು ಸಾಮಾನ್ಯವಾಗಿದೆ’ ಎಂದು ಕೇರಳ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ವಿ ಮನೋಜ್‌ ಕುಮಾರ್‌ ತಿಳಿಸಿದರು.

- Advertisement -

‘ಜನನ‌ವಾದ ಎರಡನೇ ವಾರದಲ್ಲಿಯೇ ಮಗುವಿಗೆ ಸುನ್ನತಿ ಮಾಡಿಸಲು ಪೋಷಕರು ಮುಂದಾಗುತ್ತಿದ್ದಾರೆ. ಇದರಿಂದ ಹೆಚ್ಚಿನ ಅಪಾಯವೇನೂ ಇಲ್ಲ’ ಎಂದು ತಿರುವಂತಪುರದ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ಹೇಳಿದರು.

- Advertisement -


Must Read

Related Articles