Home ಕರಾವಳಿ ಕಾಪು: ಮಾರಿಪೂಜೆಯಲ್ಲಿ ಕೋಳಿ, ಮಲ್ಲಿಗೆ ದರ ದುಪ್ಪಟ್ಟು; ಓಲಗ ಊದಿದ‌ ಮುಸ್ಲಿಂ ಕುಟುಂಬ!

ಕಾಪು: ಮಾರಿಪೂಜೆಯಲ್ಲಿ ಕೋಳಿ, ಮಲ್ಲಿಗೆ ದರ ದುಪ್ಪಟ್ಟು; ಓಲಗ ಊದಿದ‌ ಮುಸ್ಲಿಂ ಕುಟುಂಬ!

ಕಾಪು: ಇತಿಹಾಸ ಪ್ರಸಿದ್ಧ ಕಾಪುವಿನ ಮಾರಿಗುಡಿಯ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ಸಂಘ ಪರಿವಾರದ ಬೆದರಿಕೆಗೆ ಮಣಿದು ದೇವಸ್ಥಾನದ ಆಡಳಿತ ಮಂಡಳಿ ಮುಸ್ಲಿಮ್ ವ್ಯಾಪಾರಸ್ಥರಿಗೆ ನಿರ್ಬಂಧ ವಿಧಿಸಿತ್ತು. ಆದರೆ, ಜಾತ್ರಾ ಮಹೋತ್ಸವ ಸಂಪನ್ನಗೊಂಡಿದ್ದು, ಮುಸ್ಲಿಮ್ ವ್ಯಾಪಾರಸ್ಥರಿಗೆ ವಿಧಿಸಲಾಗಿದ್ದ ನಿರ್ಬಂಧದಿಂದ ಭಕ್ತಾದಿಗಳು ಸಂಕಷ್ಟ ಪಟ್ಟಿರುವುದಾಗಿ ಸ್ಥಳೀಯರು ದೂರಿದ್ದಾರೆ.


ಮಾರಿಗುಡಿಯ ಜಾತ್ರಾ ಮಹೋತ್ಸವದಲ್ಲಿ ಸಾಮಾನ್ಯವಾಗಿ ಕೋಳಿ ಹಾಗೂ ಮಲ್ಲಿಗೆ ಹೂವಿನ ಮಾರಾಟ ಜೋರಾಗಿ ನಡೆಯುವುದು ಸಾಮಾನ್ಯ. ಈ ಬಾರಿ ಮುಸ್ಲಿಮ್ ವ್ಯಾಪಾರಸ್ಥರಿಗೆ ನಿಷೇಧ ವಿಧಿಸಿದ್ದರ ಪರಿಣಾಮ ಮಾರಿಗುಡಿ ಸುತ್ತಮುತ್ತ ಮಾರಾಟ ನಡೆಸುತ್ತಿದ್ದ ಇತರೆ ವ್ಯಾಪಾರಸ್ಥರು ದುಪ್ಪಟ್ಟು ದರದಲ್ಲಿ ಕೋಳಿ ಮಾಂಸ ಮಾರಾಟ ನಡೆಸುತ್ತಿದ್ದರು. ಇನ್ನೊಂದೆಡೆ ಮಲ್ಲಿಗೆ ಹೂವಿಗೂ ಇದೇ ಪರಿಸ್ಥಿತಿ ಇತ್ತು. ಹೀಗಾಗಿ ಕಾಪು ಮಾರುಕಟ್ಟೆ ಹಾಗೂ ದೇಗುಲ ವ್ಯಾಪ್ತಿಯಿಂದ ಹೊರಗಡೆ ಕೋಳಿ ಮಾರಾಟ ನಡೆಸುತ್ತಿದ್ದ ಮುಸ್ಲಿಮ್ ವ್ಯಾಪಾರಿಗಳ ಬಳಿ ಹಿಂದೂ ಭಕ್ತರು ವ್ಯಾಪಾರ ನಡೆಸಿದ್ದಾಗಿ ಸ್ಥಳೀಯರೊಬ್ಬರು ತಿಳಿಸಿದ್ದಾರೆ.


ಅಲ್ಲದೇ, ವ್ಯಾಪಾರಸ್ಥರಿಗೆ ನಿರ್ಬಂಧ ವಿಧಿಸಿದ್ದರೂ ವಾಲಗ ಊದುವ ಸಂಪ್ರದಾಯವನ್ನು ಮುಸ್ಲಿಂ ಕುಟುಂಬವೊಂದೇ ನಿರ್ವಹಿಸಿದ್ದು, ಸಾಂಪ್ರದಾಯಿಕವಾಗಿ ನಡೆದುಕೊಂಡ ಬಂದ ಈ ಸೇವೆಯನ್ನು ಯಾರೂ ಮುಸ್ಲಿಮರಿಂದ ಬೇಡ ಎಂದು ನಿರ್ಬಂಧಿಸದಿರುವುದು ಕೂಡಾ ಭಕ್ತರ ಅಚ್ಚರಿಗೆ ಕಾರಣವಾಯಿತು.

Join Whatsapp
Exit mobile version