ಬೆಂಗಳೂರು: ಇತ್ತೀಚೆಗೆ ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ನಡೆದ ಸಂದರ್ಭದಲ್ಲಿ, ನಿಷ್ಕಾರಣವಾಗಿ ಎರಡು ಭಿನ್ನ ಕೋಮುಗಳ ನಡುವೆ ಕೋಮುದ್ವೇಷ ಹರಡಿ, ಅಶಾಂತಿ ಸೃಷ್ಡಿಸಿದ್ದಾರೆ ಎಂದು ಆರೋಪಿಸಿ ಸಚಿವ ಈಶ್ವರಪ್ಪ ವಿರುದ್ಧ ಬೆಂಗಳೂರು ವಿಶೇಷ ನ್ಯಾಯಾಲಯದಲ್ಲಿ ಪಿಸಿಆರ್ ದೂರು ದಾಖಲಾಗಿದೆ.
ಶಿವಮೊಗ್ಗದ ಪೀಸ್ ಆರ್ಗನೈಝೇಶನ್ ಮುಖಂಡ ರಿಯಾಝ್ ಅಹಮದ್ ದೂರು ದಾಖಲಿಸಿದ್ದಾರೆ.
ಹರ್ಷ ಕೊಲೆಗೆ ಮುಸ್ಲಿಂ ಜನಾಂಗವೇ ಕಾರಣ ಎಂಬ ದ್ವೇಷಪೂರಿತ ಹೇಳಿಕೆ ನೀಡುವ ಮೂಲಕ ನಿರ್ದಿಷ್ಟ ಸಮುದಾಯವನ್ನು ಗುರಿಪಡಿಸಿ , ಅಮಾಯಕರನ್ನು ಕೆರಳಿಸಿ, ಕೋಮು ಸಂಘರ್ಷಕ್ಕೆ ಅನುವು ಮಾಡಿಕೊಟ್ಟಿರುವ ಈಶ್ವರಪ್ಪ ವಿರುದ್ಧ ಅಪರಾಧ ಪ್ರಕ್ರಿಯೆ ಸಂಹಿತೆ ಕಲಂ 200ರಡಿ ದೂರನ್ನು ದಾಖಲಿಸಲಾಗುತ್ತಿದೆ’ ಎಂದು ರಿಯಾಝ್ ನೀಡಿದ ದೂರಲ್ಲಿ ಈ ಅಂಶಗಳು ಒಳಗೊಂಡಿದೆ.